ಇನ್ನುಮುಂದೆ ಮಾಲ್‌ಗಳಲ್ಲಿಯೂ ಲಭ್ಯ ಭಾರತ್‌ ಅಕ್ಕಿ

ಕೇಂದ್ರ ಸರ್ಕಾರ ಬಡವರಿಗಾಗಿ ವಿತರಿಸುತ್ತಿರುವ 29ರೂ. ಬೆಲೆಯ ‘ಭಾರತ್‌ ಅಕ್ಕಿ’ಯು ಇದೀಗ ವಿವಿಧ ಮಾಲ್‌ಗಳಲ್ಲಿ ಮಾರಾಟ ಮಾಡಲು ನ್ಯಾಷನಲ್‌ ಅಗ್ರಿಕಲ್ಟರ್‌ ಕೋಆಪರೇಟಿವ್‌ ಮಾರ್ಕೆಟಿಂಗ್‌ ಫೆಡರೇಷನ್‌ ಆಫ್‌
ಇಂಡಿಯಾ ಲಿ. ನಿರ್ಧರಿಸಿದೆ.

ರಿಲಯನ್ಸ್‌ ಜತೆಗೆ ಈಗ ಸ್ಟಾರ್‌ ಬಜಾರ್‌, ಜಿಯೊ ಮಾರ್ಟ್‌ ಸೇರಿ ಹಲವು ಮಾಲ್‌ಗಳಲ್ಲಿ ಲಭ್ಯ. ಆನ್‌ಲೈನ್‌-ಆಫ್‌ಲೈನ್‌ನಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ.

ಈ ಅಕ್ಕಿ ಮಾರಾಟಕ್ಕೆ ನೀತಿ ಸಂಹಿತೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ನಾಫೆಡ್‌ ಕರ್ನಾಟಕ ವಿಭಾಗ ಮುಖ್ಯಸ್ಥೆ ಜ್ಯೋತಿ ಪಾಟೀಲ್‌ ತಿಳಿಸಿದ್ದಾರೆ.

Comments (0)
Add Comment