ಇನ್ಮುಂದೆ ವಾಟ್ಸಾಪ್‌‌ನಲ್ಲಿಯೂ ಬರಲಿದೆ ಜಾಹೀರಾತು!

ನವದೆಹಲಿ: ಸದಾ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಿರುವ ವಾಟ್ಸಾಪ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಯೂಟ್ಯೂಬ್ ಗಳಲ್ಲಿ ಇದ್ದಂತೆ ವಾಟ್ಸಪ್ ನಲ್ಲಿಯೂ ಜಾಹೀರಾತುಗಳು ಕಾಣಿಸಲಿದೆ.

ವಾಟ್ಸಪ್ ಸ್ಟೇಟಸ್ ಮತ್ತು ಚಾನೆಲ್ ಗಳಲ್ಲಿ ಜಾಹೀರಾತುಗಳನ್ನು ತರಲು ಸಂಸ್ಥೆ ಮುಂದಾಗಿದ್ದು, ಇದೇ ಸಮಯದಲ್ಲಿ ಹೊಸ ವಾಯ್ಸ್ ಮೆಸೇಜ್ ಮತ್ತು ಸ್ಟಿಕ್ಕರ್ ಫೀಚರ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಾಟ್ಸಪ್ ಸಿಇಒ ವಿಲ್ ಕ್ಯಾತ್ ಕಾರ್ಟ್, ಸ್ಟೇಟಸ್ ಮತ್ತು ಚಾನೆಲ್‌ ಗಳಲ್ಲಿನ ಜಾಹೀರಾತುಗಳ ಸಂಭಾವ್ಯತೆಯ ಬಗ್ಗೆ ಸುಳಿವು ನೀಡಿದರು. ಮೆಸೇಜ್ ಕಳುಹಿಸುವ ಇನ್‌ ಬಾಕ್ಸ್‌ ಗೆ ಜಾಹೀರಾತುಗಳು ನುಗ್ಗುವುದಿಲ್ಲ ಎಂದು ಅವರು ಒತ್ತಿಹೇಳಿದರು. ಬದಲಾಗಿ, ಇವು ಪ್ರಾಥಮಿಕವಾಗಿ ಪಬ್ಲಿಕ್ ಬ್ರಾಡ್ ಕಾಸ್ಟಿಂಗ್ ಮತ್ತು ಗುಂಪು ಚರ್ಚೆಗಳಿಗೆ ಮೀಸಲಾಗಿರುವ ವಿಭಾಗಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಬಹುದು ಎಂದರು.

ಇನ್ನು ಜಾಹೀರಾತು ಮಾತ್ರವಲ್ಲದೆ ವಾಟ್ಸಪ್ ಹೊಸ ಫೀಚರ್ ಗಳಾದ ವಾಯ್ಸ್ ಮೆಸ್ಸೇಜಿಂಗ್ ಮತ್ತು ಸ್ಟಿಕ್ಕರ್ ಗಳ ಮೇಲೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

Comments (0)
Add Comment