ಇಸ್ರೇಲ್‌ನ ಚಿತ್ರಣ ನೆನೆದು ಲೈವ್‌ನಲ್ಲೆ ಕಣ್ಣೀರಿಟ್ಟ, ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ

ವಾಷಿಂಗ್ಟನ್: ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಲೈವ್ ಸಂದರ್ಶನದ ವೇಳೆ ಕಣ್ಣೀರಿಟ್ಟ ಪ್ರಸಂಗ ಕಂಡುಬಂದಿದೆ. ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ಪಡೆಗಳ ನಡುವಿನ ಸಮರ ಮುಂದುವರೆದಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಆತಂಕ ಮೂಡಿಸಿದೆ.

ಈ ವಿಚಾರದ ಬಗ್ಗೆ ಚರ್ಚಿಸಲು ಖಾಸಗಿ ವಾಹಿನಿವೊಂದರಲ್ಲಿ ಲೈವ್‌ ಸಂದರ್ಶನಕ್ಕೆ ಬಂದ ವಕ್ತಾರ ಜಾನ್ ಕಿರ್ಬಿ, ಇಸ್ರೇಲ್‌ ಸಮರದ ಚಿತ್ರಣ ನೆನೆದು ಕಣ್ಣೀರಿಟ್ಟಿದ್ದಾರೆ. ಹಮಾಸ್‌ನ ಮಾರಣಾಂತಿಕ ದಾಳಿಯಲ್ಲಿ ಸಾವನ್ನಪ್ಪಿದವರ ಬಗ್ಗೆ ಹಾಗೂ ಬಳಲುತ್ತಿರುವ ಇಸ್ರೇಲಿ ಸಂತ್ರಸ್ತರ ಬಗ್ಗೆ ಅವರು ಮಾತನಾಡಿದ್ದಾರೆ. ‘ಈ ಚಿತ್ರಗಳನ್ನು ನೋಡುವುದು ತುಂಬಾ ಕಷ್ಟವಾಗುತ್ತದೆ’ ಎಂದಿದ್ದಾರೆ. ಇನ್ನು ಈ ಸಮರದಲ್ಲಿ ಬಲಿಯಾದ ಕುಟುಂಬಸ್ಥರ ನೆನೆದು ಕಣ್ಣೀರಿಟ್ಟಿದ್ದಾರೆ. ಇನ್ನು ಇಸ್ರೇಲ್‌ಗೆ ಬೆಂಬಲ ತೋರಿಸಲು ಸೋಮವಾರ ರಾತ್ರಿ ಶ್ವೇತಭವನವನ್ನು “ವೈಟ್ ಹೌಸ್ ಇನ್ ವೈಟ್ ಅಂಡ್ ಬ್ಲೂ ಟುನೈಟ್ ಎಂದು ಬೆಳಗಿಸಲಾಯಿತು ಎಂದು ತಿಳಿಸಿದ್ದಾರೆ.

Comments (0)
Add Comment