ಇಸ್ರೇಲ್‌ನ 40 ಮಕ್ಕಳ ಶಿರಚ್ಚೇದ.! – ಹಮಾಸ್ ಉಗ್ರರನ್ನು ಮಟ್ಟಹಾಕಲು ಇಸ್ರೇಲ್‌ಗೆ ಬಂದಿಳಿದ ಅಮೆರಿಕ ಸೈನ್ಯ

ಜೆರುಸಲೇಮ್: ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಕ್ರೌರ್ಯ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ನಿರಂತರ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ವಿರುದ್ಧ ಪ್ರತೀಕಾರಕ್ಕೆ ಹಮಾಸ್ ಉಗ್ರರು 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ. ಇಸ್ರೇಲ್ ಮನೆಗಳ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು 40 ಮಕ್ಕಳ ಶಿರಚ್ಚೇದ ಮಾಡಿದ್ದಾರೆ. ಎಳೆ ಹಸಗೂಸು, ಒಂದು ವರ್ಷದಿಂದ 14 ವರ್ಷದ ಮಕ್ಕಳನ್ನೂ ಬಿಡದೇ ಶಿರಚ್ಛೇಧ ಮಾಡಲಾಗಿದೆ. ಇನ್ನು ಹೆಣ್ಣು ಮಕ್ಕಳು, ಮಹಿಳೆಯರು ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ ತಾವೇ ಹಮಾಸ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈವರೆಗೂ 900 ಇಸ್ರೇಲ್ ನಾಗರೀಕರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆ. 2,600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ ಒಳಗೆ ಹಮಾಸ್ ಉಗ್ರರು ನಡೆಸಿದ ಭೀಕರತೆ ಅಮೆರಿಕ ಕೆರಳಿದೆ. ಅಮೆರಿಕ ಆಪರೇಶನ್ ಫೋರ್ಸ್ ಇದೀಗ ಇಸ್ರೇಲ್‌ಗೆ ಬಂದಿಳಿದಿದೆ. ಕಾರ್ಯಾಚರಣೆ ತೀವ್ರಗೊಳ್ಳುತ್ತಿದೆ.

Comments (0)
Add Comment