ಇಸ್ರೇಲ್ ದಾಳಿಯಲ್ಲಿ ಹಮಾಸ್‌ನ ಇಬ್ಬರು ಹಿರಿಯ ಅಧಿಕಾರಿಗಳ ಹತ್ಯೆ

ಗಾಝಾ: ವೈಮಾನಿಕ ದಾಳಿಯಲ್ಲಿ ಹಮಾಸ್ ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ತಿಳಿಸಿದೆ.

ಗಾಝಾ ಪಟ್ಟಿಯ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ನ ರಾಜಕೀಯ ಘಟಕದ ವಿತ್ತಸಚಿವ ಜವಾದ್ ಅಬು ಶಮಾಲ ಹಾಗೂ ಹಮಾಸ್ ನ ಆಂತರಿಕ ವ್ಯವಹಾರ ವಿಭಾಗದ ಮುಖ್ಯಸ್ಥ ಝಕಾರಿಯಾ ಅಬು ಮೋಮ್ಮರ್ ಸಾವನ್ನಪ್ಪಿದ್ದಾರೆ. ಇನ್ನು ಜವಾದ್ ಅವರು ಹಮಾಸ್ ನ ಹಣಕಾಸು ವಿಭಾಗವನ್ನು ನಿರ್ವಹಿಸುತ್ತಿದ್ದು, ಝಕಾರಿಯಾ ಹಮಾಸ್ ನ ಗಾಝಾ ಮುಖ್ಯಸ್ಥ ಯಾಹ್ಯಾ ಸಿನ್ವರ್ನ ಅತ್ಯಂತ ನಂಬಿಕಸ್ತ ಸಹವರ್ತಿಯಾಗಿದ್ದರು ಎನ್ನಲಾಗಿದೆ.

Comments (0)
Add Comment