ಇಸ್ರೇಲ್‌-ಹಮಾಸ್ ಯುದ್ಧ: ಗೂಗಲ್ ಉದ್ಯೋಗಿಗಳ ಪರಿಸ್ಥಿತಿ ಬಗ್ಗೆ ಸುಂದರ್‌ ಪಿಚೈ ಕಳವಳ

ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಸಂಘರ್ಷವು ದಿನದಿಂದ ದಿನಕ್ಕೆ ಭೀಕರವಾಗಿ ಸಾಗುತ್ತಿದೆ. ಹಮಾಸ್ ಉಗ್ರರ ಕ್ರೌರ್ಯವು ಜಗತ್ತಿನ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇದರಿಂದಾಗಿ ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್‌ ಗೂಗಲ್‌ ಸಂಸ್ಥೆಯ ಸಿಇಒ ಸುಂದರ್‌ ಪಿಚೈ ಅವರು ಗೂಗಲ್ ಸಂಸ್ಥೆಯ ಉದ್ಯೋಗಿಗಳ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಸುಂದರ್‌ ಪಿಚೈ, ‘ಈ ವಾರಾಂತ್ಯದಲ್ಲಿ ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗಳು ಮತ್ತು ಹೆಚ್ಚುತ್ತಿರುವ ಸಂಘರ್ಷದಿಂದ ತೀವ್ರ ದುಃಖಿತನಾಗಿದ್ದೇನೆ. Google ಇಸ್ರೇಲ್‌ನಲ್ಲಿ 2 ಕಚೇರಿಗಳು ಮತ್ತು 2,000 ಉದ್ಯೋಗಿಗಳನ್ನು ಹೊಂದಿದೆ. ಅವರು ನೋವು ಅನುಭವಿಸುತ್ತಿರುವುದನ್ನು ಊಹಿಸಲೂ ಸಾಧ್ಯವಿಲ್ಲ. ಶನಿವಾರದಿಂದ ನೌಕರರ ಸುರಕ್ಷತೆಯ ಮೇಲೆ ನಮ್ಮ ಗಮನವು ಕೇಂದ್ರೀಕೃತವಾಗಿದೆ. ನಾವು ಈಗ ನಮ್ಮ ಎಲ್ಲಾ ಸ್ಥಳೀಯ ಉದ್ಯೋಗಿಗಳೊಂದಿಗೆ ಸಂಪರ್ಕವನ್ನು ಸಾಧಿಸಿದ್ದೇವೆ ಮತ್ತು ಅವರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ನಮ್ಮ ಉತ್ಪನ್ನಗಳ ಮೂಲಕ ಜನರಿಗೆ ವಿಶ್ವಾಸಾರ್ಹ, ನಿಖರವಾದ ಮಾಹಿತಿಯನ್ನು ಒದಗಿಸಲು ಮತ್ತು ನಮ್ಮ ತಜ್ಞರು ನೋಡುತ್ತಿರುವ ಸೈಬರ್ ಚಟುವಟಿಕೆಯನ್ನು ಹಂಚಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ. ನಾವು ನೆಲದ ಮೇಲೆ ಮಾನವೀಯ ಮತ್ತು ಪರಿಹಾರ ಸಂಸ್ಥೆಗಳನ್ನು ಬೆಂಬಲಿಸುತ್ತೇವೆ. ನಮ್ಮ ಆಲೋಚನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ’ ಎಂದು ಬರೆದುಕೊಂಡಿದ್ದಾರೆ.

Comments (0)
Add Comment