ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಮತದಾರರು ಎಷ್ಟು.?

 

ಹೊಸಪೇಟೆ: ಈಶಾನ್ಯ ಕರ್ನಾಟಕ ಪದವೀಧರ ಮತದಾರರ ಪಟ್ಟಿ ಪರಿಷ್ಕರಿಸಿ, ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಗೆ ಅಕ್ಟೋಬರ್ 1 ರಿಂದ ನವಂಬರ್ 6ರ ವರೆಗೆ ಅರ್ಜಿ ಸ್ವೀಕರಿಸಿ, ಡಿಸೆಂಬರ್ 23ರ ವರೆಗಿನ ಆಕ್ಷೇಪಣೆ ಅವಧಿಯಲ್ಲಿ ಸ್ವೀಕೃತವಾದ ಅರ್ಹ ಮತದಾರರ ನೋಂದಣೆ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಅಂತಿಮ ಮತದಾರ ಪಟ್ಟಿ ವಿವರ:

ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ವಿಜಯನಗರ, ಕೂಡ್ಲಿಗಿ ಹಾಗೂ ಹರಪನಹಳ್ಳಿ ತಾಲ್ಲೂಕು ಒಳಗೊಂಡAತೆ 11,079 ಪುರುಷ, 5918 ಮಹಿಳಾ ಮತ್ತು 2 ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16,999 ಪದವೀಧರ ಮತದಾರರಿದ್ದಾರೆ.

ಅಂತಿಮ ಮತದಾರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿ, ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ಕಚೇರಿಗಳಲ್ಲಿ ಪ್ರಕಟಿಸಿದ್ದು, ವಿಜಯನಗರ ಜಿಲ್ಲಾ ವೆಬ್‌ಸೈಟ್ ಹಾಗೂ ಚುನಾವಣಾ ಆಯೋಗದ ವೆಬ್‌ಸೈಟ್ ನಲ್ಲಿ ಸಹ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

ನಿರಂತರ ಮತದಾರ ನೋಂದಣೆ ಪ್ರಕ್ರಿಯ ಚಾಲನೆಯಲ್ಲಿದ್ದು, ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣೆ ಮಾಡಲು ನಮೂನೆ-18 ನ್ನು ಸಲ್ಲಿಸಲು ಅವಕಾಶ ಇರುತ್ತದೆ.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಮತದಾರರು ಎಷ್ಟು.?
Comments (0)
Add Comment