ಈ ಕೆಲಸ ಮಾಡದಿದ್ರೆ ಕಿಡ್ನಿ ತೊಂದರೆಗೊಳಗಾಗಬಹುದು.!

 

 

ನಮ್ಮ ದೇಹದ ಅತ್ಯಮೂಲ್ಯ ಭಾಗಗಳಲ್ಲಿ ಕಿಡ್ನಿ ಕೂಡಾ ಒಂದು. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವೂ ಹೌದು. ಎರಡು ಕಿಡ್ನಿ ಇರುವ ಕಾರಣ ಒಂದು ಹಾಳಾದರೂ ಇನ್ನೊಂದು ಕೆಲಸ ಮಾಡುತ್ತದೆ ಎಂದು ನಿರ್ಲಕ್ಷಿಸುವುದು ಸರಿಯಲ್ಲ.

ಒಮ್ಮೆ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದು ಗೊತ್ತಾದ ಬಳಿಕ ಈ ಸಲಹೆಗಳನ್ನು ಪಾಲಿಸಿ. ದೇಹದ ತೂಕ ವಿಪರೀತ ಹೆಚ್ಚಲು ಬಿಡಬೇಡಿ. ಇದರಿಂದ ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತದೆ.

ನೋವು ನಿವಾರಕ ಮಾತ್ರೆಗಳನ್ನು ಹೆಚ್ಚು ಸೇವಿಸದಿರಿ. ತಲೆನೋವು, ಹೊಟ್ಟೆ ನೋವು ಎಂಬ ಕಾರಣಕ್ಕೆ ಮಾತ್ರೆಗಳ ಮೊರೆ ಹೋಗದಿರಿ. ಸಾಧ್ಯವಾದಷ್ಟು ಮನೆಮದ್ದುಗಳ ನೆರವಿನಿಂದಲೇ ಕಡಿಮೆ ಮಾಡಿಕೊಳ್ಳಿ.

ರಕ್ತದೊತ್ತಡ ನಿಯಂತ್ರಣದಲ್ಲಿ ಇರಲಿ. ಇದು ಹೆಚ್ಚಾದರೆ ಕಿಡ್ನಿ ಮೇಲೆ ನೆಗೆಟಿವ್ ಪರಿಣಾಮಗಳನ್ನು ಬೀರಬಹುದು. ಕಿಡ್ನಿಯ ಆರೋಗ್ಯಕ್ಕೆ ಮಧುಮೇಹ ನಿಯಂತ್ರಣದಲ್ಲಿರುವುದೂ ಬಹಳ ಮುಖ್ಯ.

ಜಂಕ್ ಪದಾರ್ಥಗಳನ್ನು ಸಾಧ್ಯವಾದಷ್ಟು ದೂರ ಮಾಡಿ. ತರಕಾರಿ ಹಣ್ಣು ಹಾಗೂ ಹಾಲಿನ ಉತ್ಪನ್ನಗಳಿಗೆ ಆದ್ಯತೆ ನೀಡಿ. ದಿನಕ್ಕೆ ಮೂರು ಲೀಟರ್ ನೀರು ತಪ್ಪದೆ ಕುಡಿಯಿರಿ. ನೀರು ಕಡಿಮೆಯಾದಷ್ಟು ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಇದೆ.

ಕುಳಿತಲ್ಲೇ ಕುಳಿತಿರಬೇಡಿ. ಸ್ವಲ್ಪ ವಾಕಿಂಗ್ ಮಾಡಿ. ಕಚೇರಿಯಲ್ಲಿದ್ದರೆ ಒಂದು ಗಂಟೆಗೊಮ್ಮೆ ಕುರ್ಚಿ ಬಿಟ್ಟು ಎದ್ದು ಆಚೀಚೆ ಓಡಾಡಿ.

ಈ ಕೆಲಸ ಮಾಡದಿದ್ರೆ ಕಿಡ್ನಿ ತೊಂದರೆಗೊಳಗಾಗಬಹುದು.!
Comments (0)
Add Comment