ಈ 5 ಬಿಸಿನೆಸ್ ಮಾಡುವವರಿಗೆ ಕೇಂದ್ರದಿಂದ ಎಚ್ಚರಿಕೆ, ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್

ಈ 5 ವಹಿವಾಟುಗಳನ್ನು ಮಾಡಿದರೆ ಮನೆಗೆ ಬರಲಿದೆ ತೆರಿಗೆ ನೋಟೀಸ್
•ಇನ್ನು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಆಗಿ ಠೇವಣಿ ಮಾಡಿದರೆ ಹಾಗೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

•ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ. ಇನ್ನು ಚಾಲ್ತಿ ಕತೆಯಲ್ಲಿ ಗರಿಷ್ಠ ಮಿತಿ 50 ಲಕ್ಷ ರೂ. ಆಗಿದೆ.

•ನೀವು 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಆಸ್ತಿ ರಿಜಿಸ್ಟ್ರಾರ್ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.

•ಷೇರುಗಳು, ಮ್ಯೂಚುವಲ್ ಫಂಡ್‌ ಗಳು, ಡಿಬೆಂಚರ್‌ ಗಳು ಮತ್ತು ಬಾಂಡ್‌ ಗಳಲ್ಲಿ ದೊಡ್ಡ ನಗದು ವಹಿವಾಟುಗಳನ್ನು ನಡೆಸುವಂತಿಲ್ಲ. ಆರ್ಥಿಕ ವರ್ಷದಲ್ಲಿ ಗರಿಷ್ಟ 10 ಲಕ್ಷದ ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.

•ಒಂದು ವರ್ಷದಲ್ಲಿ ನೀವು ಎಫ್ ಡಿಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

Comments (0)
Add Comment