ಉಡುಪಿ: ಸಿಎಂ ಸಿದ್ಧರಾಮಯ್ಯ ಒಂದು ಸಮುದಾಯದ ಜೊತೆ ನಿಲ್ಲುವುದು ಸರಿಯಲ್ಲ – ಪೇಜಾವರ ಶ್ರೀ

ಉಡುಪಿ: ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವಾಗಿದೆ. ಮುಖ್ಯಮಂತ್ರಿಯಾದವರು ಒಂದು ಸಮುದಾಯ, ವರ್ಗದ ಜೊತೆ ನಿಲ್ಲುತ್ತೇವೆ ಎನ್ನುವುದು ಎಷ್ಟು ಸರಿ? ನಿಮ್ಮ ಪರ ಇದ್ದೇವೆ. ನಿಮ್ಮ ಪಾಲು ಕೊಡುತ್ತೇವೆ ಎನ್ನುವಂತಹ ಮಾತುಗಳು ಸರಿಯಲ್ಲ. ಇದರಿಂದ ಹಿಂದೂ ಸಮಾಜವನ್ನು ಯಾರೂ ಕೇಳುವವರಿಲ್ಲ ಎಂಬ ಭಾವನೆ ಬರುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಸಿಎಂ ಸಿದ್ದರಾಮಯ್ಯ‌ ಮುಸ್ಲಿಂ ಒಲೈಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾತ್ಯಾತೀತವಾಗಿರಬೇಕು. ಇದು ಸಂವಿಧಾನ ಬದ್ಧವಾಗಿ ಆಯ್ಕೆಯಾದ ಸರಕಾರದ ಜವಾಬ್ದಾರಿ. ಎಲ್ಲರನ್ನು ಸದ್ಭಾವದಿಂದ ಕಾಣಬೇಕು. ಅಧಿಕಾರ ಸ್ಥಾನದಲ್ಲಿರುವವರು ಎಲ್ಲರನ್ನು ಹೊಂದಿಸಿಕೊಂಡು ಹೋಗಬೇಕು ಎಂದರು. ಯಾರಿಗೂ ತೊಂದರೆ ಆಗದಂತೆ ಎಲ್ಲಾ ಪ್ರಜೆಗಳಿಗೆ ಅನುಕೂಲ ಮಾಡಿಕೊಡಬೇಕು. ಹಾಗಿದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Comments (0)
Add Comment