ಉದ್ದಿಮೆ ಪರವಾನಿಗೆ ಆನ್‍ಲೈನ್ ಶುಲ್ಕ ಪಾವತಿ ಹೆಸರಿನಲ್ಲಿ ವಂಚನೆ.!

 

ಚಿತ್ರದುರ್ಗ : ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸುವಂತೆ ಅನಾಮಿಕ ವ್ಯಕ್ತಿಗಳು ನಗರಸಭೆ ಹೆಸರಿನಲ್ಲಿ ಕರೆ ಮಾಡಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ನಗರಸಭೆಯಿಂದ ಆನ್‍ಲೈನ್ ಮೂಲಕ ಶುಲ್ಕ ಪಾವತಿಸಿಕೊಳ್ಳಲು ಯಾರನ್ನೂ ನಿಯೋಜಿಸಿರುವುದಿಲ್ಲ.

ಅಂಗಡಿ ಹಾಗೂ ಉದ್ದಿಮೆ ಮಾಲೀಕರಿಗೆ ಆನ್‍ಲೈನ್ ಮೂಲಕ ಉದ್ದಿಮೆ ಶುಲ್ಕ ಪಾವತಿಸುವಂತೆ ಕರೆ ಬಂದರೆ, ತಕ್ಷಣವೇ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ವಂಚನೆಗೆ ಒಳಗಾಗಬಾರದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

 

ಉದ್ದಿಮೆ ಪರವಾನಿಗೆ ಆನ್ಲೈನ್ ಶುಲ್ಕ ಪಾವತಿ ಹೆಸರಿನಲ್ಲಿ ವಂಚನೆ.!
Comments (0)
Add Comment