ಉಭಯ ದೇಶಗಳ ಬಾಂಧವ್ಯ : 6 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ತಾಂಜನಿಯಾ..!

ಭಾರತ ಮತ್ತು ತಾಂಜನಿಯಾ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಉಭಯ ದೇಶಗಳು ಕೈ ಮಿಲಾಯಿಸಿವೆ.. ಈ ವೇಳೆ ಭಾರತ-ತಾಂಜನಿಯಾ 6 ಒಪ್ಪಂದಗಳಿಗೆ ಸಹಿ ಹಾಕಿವೆ. ಡಿಜಿಟಲ್‌ ಡೊಮೇನ್‌, ಸಂಸ್ಕೃತಿ, ಕ್ರೀಡೆ, ಕಡಲ ಕೈಗಾರಿಕೆಗಳಿಗೆ ಸಹಕಾರ ನೀಡಿ ರಕ್ಷಣ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು, 5 ವರ್ಷಗಳ ಯೋಜನೆಗೆ ಪರಸ್ಪರ ಒಪ್ಪಿಗೆಯನ್ನು ಸೂಚಿಸಿವೆ. ಅಂದ್ಹಾಗೆ ತಾಂಜನಿಯಾ ಅಧ್ಯಕ್ಷರಾದ ಸಮಿಯಾ ಸುಲುಹು ಹಸ್ಸನ್‌ರವರು ಭಾರತ ಪ್ರವಾಸದಲ್ಲಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ಒಪ್ಪಂದಕ್ಕೆ ಅಸ್ತು ಎಂದಿದ್ದಾರೆ.

Comments (0)
Add Comment