ಉಭಯ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ

ನವದೆಹಲಿ: ಇಂದು ಲೋಕಸಭೆ ಮತ್ತು ರಾಜ್ಯಸಭಾ ಕಲಾಪ ನಡೆಯುಯುತ್ತಿದೆ. ಈ ಕಲಾಪಕ್ಕೆ ಕಡ್ಡಾಯವಾಗಿ ಬಿಜೆಪಿ ಸದಸ್ಯರು ಹಾಜರಾಗುವಂತೆ ವಿಪ್ ಜಾರಿ ಮಾಡಲಾಗಿದೆ. ಇನ್ನು ಈ ಕಲಾಪದಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ಸಂಸತ್ತಿನ ಉಭಯ ಸದನಗಳು ನಿರ್ಣಯ ಅಂಗೀಕರಿಸಲಿವೆ.

ಕಲಾಪದಲ್ಲಿ ಬಿಜೆಪಿ ಸಂಸದ ಸತ್ಯಪಾಲ್‌ ಸಿಂಗ್‌ ಹಾಗೂ ಶಿವಸೇನೆ ಸಂಸದ ಶ್ರೀಕಾಂತ್‌ ಅವರು ರಾಮಮಂದಿರದ ಬಗ್ಗೆ ಚರ್ಚೆ ಪ್ರಾರಂಭಿಸಲಿದ್ದು, ಈ ಚರ್ಚೆಗೆ ವಿರೋಧ ಪಕ್ಷಗಳು ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಈ ಕಲಾಪದಲ್ಲಿ ರಾಮನು ಭಾರತದ ಸಂಕೇತ, ಭಾರತದ ಸಂಸ್ಕೃತಿಯ ಪ್ರತೀಕ, ರಾಮ ಏಕ ಭಾರತ ಶ್ರೇಷ್ಠ, ಭಾರತದ ಪ್ರತೀಕ ಎಂಬ ನಿರ್ಣಯಗಳು ಅಂಗೀಕಾರವಾಗುವ ಸಾಧ್ಯತೆಗಳಿವೆ.

ಇನ್ನು ಇಂದು ರಾಜ್ಯಸಭೆಯಲ್ಲಿ, ಯುಪಿಎ ಅವಧಿ ಆರ್ಥಿಕ ವೈಫಲ್ಯದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಮಂಡಿಸಿದ ಶ್ವೇತ ಪತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ನಿನ್ನೆ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನು ಕೇಂದ್ರ ಸರ್ಕಾರ ಒಂದು ದಿನ ವಿಸ್ತರಣೆ ಮಾಡಿದೆ. ಇದೀಗ ಇಂದು ಕಲಾಪದ ಅಂತಿಮ ದಿನವಾಗಿದ್ದು, ತನ್ನೆಲ್ಲಾ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಕಡ್ಡಾಯವಾಗಿ ಕಲಾಪದಲ್ಲಿ ಭಾಗವಹಿಸುವಂತೆ ವಿಪ್ ಜಾರಿ ಮಾಡಲಾಗಿದೆ.

Comments (0)
Add Comment