ಎಂಟು ಜನರಿದ್ದ ಯುಎಸ್ ಮಿಲಿಟರಿ ವಿಮಾನ ಜಪಾನ್ ಕರಾವಳಿ ತೀರದಲ್ಲಿ ಪತನ

ಟೋಕಿಯೋ: ಎಂಟು ಜನರಿದ್ದ ಯುಎಸ್ ಮಿಲಿಟರಿ ವಿಮಾನವು ಪಶ್ಚಿಮ ಜಪಾನ್‌ನಲ್ಲಿ ಬುಧವಾರ ಸಮುದ್ರಕ್ಕೆ ಪತನಗೊಂಡಿದ್ದು, ಈ ಪೈಕಿ ಮೂವರನ್ನು ಮೀನುಗಾರರು ಸಮುದ್ರದಿಂದ ಮೇಲಕ್ಕೆ ಎಳೆದುತಂದಿದ್ದಾರೆ. ಎನ್ನಲಾಗಿದೆ.

ಸ್ಥಳಿಯ ಕಾಲಮಾನ ಮಧ್ಯಾಹ್ನ 02:47 ಗಂಟೆಗೆ ವಿಮಾನ ಟಿಲ್ಟ್-ರೋಟರ್ V-22 ಓಸ್ಪ್ರೇ ಯಕುಶಿಮಾ ದ್ವೀಪದಲ್ಲಿ ಪತನಗೊಂಡಿದೆ. ವಿಮಾನ ಕೆಳಗೆ ಬರುವಾಗ ಎಡ ಭಾಗದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ವಿಮಾನವು ಪಶ್ಚಿಮ ಜಪಾನ್‍ನ ಸಮುದ್ರಕ್ಕೆ ಅಪ್ಪಳಿಸಿದೆಎಂದು ಜಪಾನ್‍ನ ಕರಾವಳಿ ಕಾವಲು ಪಡೆ ಹೇಳಿದೆ

ಟಿಲ್ಟ್-ರೋಟರ್ ವಿಮಾನವು ಹೆಲಿಕಾಪ್ಟರ್ ಮತ್ತು ಸ್ಥಿರ-ವಿಂಗ್ ಪ್ಲೇನ್ ಎರಡರಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ಟೋಕಿಯೊದಲ್ಲಿನ ಯುಎಸ್ ಯೊಕೋಟಾ ವಾಯುನೆಲೆಗೆ ಸಂಬಂಧಿಸಿದಾಗಿತ್ತು.

Comments (0)
Add Comment