ಎಚ್ಚರ…! ನೀವೂ ಕರಕಲಾದ ʼಬ್ರೆಡ್ʼ ಸೇವನೆ ಮಾಡ್ತೀರಾ…?

ಸಾಮಾನ್ಯವಾಗಿ ಎಲ್ಲರಿಗೂ ಬ್ರೆಡ್ ಇಷ್ಟವಾಗುತ್ತದೆ. ಸಮಯ ಉಳಿಸಲು ಅನೇಕರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಸೇವನೆ ಮಾಡ್ತಾರೆ.

ಬ್ರೆಡ್ ಜೊತೆ ಬೆಣ್ಣೆ ಹಾಕಿ ಬಿಸಿ ಮಾಡಿ ಕೆಲವರು ತಿಂದ್ರೆ ಮತ್ತೆ ಕೆಲವರು ಸ್ಯಾಂಡ್ವಿಚ್ ಮಾಡಿ ಸೇವನೆ ಮಾಡ್ತಾರೆ. ಕೆಲವೊಮ್ಮೆ ಬ್ರೆಡ್ ಹೆಚ್ಚು ಬೆಂದ ಕಾರಣ ಕರಕಲಾಗುತ್ತದೆ. ಕೆಲವರಿಗೆ ಈ ಕರಕಲು ಬ್ರೆಡ್ ತುಂಬ ಇಷ್ಟ ಕೂಡ.

ನೀವೂ ಕರಕಲು ಬ್ರೆಡ್ ಸೇವನೆ ಮಾಡುತ್ತಿದ್ರೆ ಇಂದೇ ಈ ಹವ್ಯಾಸ ಬಿಡಿ. ವರದಿಯೊಂದರ ಪ್ರಕಾರ ಪಿಷ್ಟದ ಪ್ರಮಾಣ ಹೆಚ್ಚಿರುವ ಆಹಾರವನ್ನು ಹೆಚ್ಚು ಬೇಯಿಸಿದಾಗ ಅಕ್ರಿಲಾಮೈಡ್ ಹೆಸರಿನ ರಾಸಾಯನಿಕ ಬಿಡುಗಡೆಯಾಗುತ್ತದೆ.

ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇದೆ, ಯುಕೆಯ ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ, ಕರಕಲಾದ ಬ್ರೆಡ್ ತಿನ್ನದಂತೆ ಸಲಹೆ ನೀಡಿದೆ.

ಬ್ರೆಡ್ ಮಾತ್ರವಲ್ಲ ಆಲೂಗಡ್ಡೆ ಸೇರಿದಂತೆ ಹೆಚ್ಚು ಪಿಷ್ಟ ಹೊಂದಿರುವ ಯಾವುದೇ ಪದಾರ್ಥವನ್ನು ತುಂಬಾ ಸಮಯ ಹಾಗೂ ದೊಡ್ಡ ಉರಿಯಲ್ಲಿ ಬೇಯಿಸಬಾರದು. ಅಕ್ರಿಲಾಮೈಡ್ ಎಷ್ಟರ ಮಟ್ಟಿಗೆ ಹಾನಿಕಾರ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯಲು ಎಷ್ಟು ಸಾಧ್ಯವೋ ಅಷ್ಟು ಕರಕಲು ಆಹಾರದಿಂದ ದೂರವಿರಿ.

Comments (0)
Add Comment