‘ಎನ್‌ಡಿಎ ಮಂತ್ರ ಭ್ರಷ್ಟಾಚಾರ್ ಹಠಾವೋ – ವಿಪಕ್ಷಗಳದು ಭ್ರಷ್ಟಾಚಾರಿ ಬಚಾವೋ’- ಮೋದಿ

ಮೀರತ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೀರತ್‌ನಿಂದ ಉತ್ತರ ಪ್ರದೇಶದ ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.

ಮುಂಬರುವ ಚುನಾವಣೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಎನ್‌ಡಿಎ ಮತ್ತು ಭ್ರಷ್ಟರನ್ನು ಉಳಿಸಲು ಹೋರಾಡುತ್ತಿರುವ ಇನ್ನೊಂದು ಗುಂಪಿನ ನಡುವೆ ನಡೆಯುವ ಚುನಾವಣೆ. ಚುನಾವಣೆ ಸರಕಾರವನ್ನು ಆಯ್ಕೆ ಮಾಡಲು ಅಲ್ಲ, ಬದಲಿಗೆ ವಿಕಸಿತ ಭಾರತ ಮಾಡಲು ಎಂದು ಹೇಳಿದರು.

ಮೋದಿಯ ಮಂತ್ರ ಭ್ರಷ್ಟಾಚಾರ್ ಹಠಾವೋ ಆಗಿದ್ದರೆ ವಿಪಕ್ಷಗಳ ಗುಂಪಿನವರು ಭ್ರಷ್ಟಾಚಾರಿ ಬಚಾವೋ ಎಂದು ಹೇಳುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.ಕಳೆದ 10 ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿರುವುದನ್ನು ದೇಶ ನೋಡಿದೆ. ಯಾವುದೇ ಮಧ್ಯವರ್ತಿ ಬಡವರ ಹಣವನ್ನು ಕದಿಯಲು ಸಾಧ್ಯವಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ, ಅದಕ್ಕಾಗಿಯೇ ಭ್ರಷ್ಟರು ಇಂದು ಕಂಬಿ ಹಿಂದೆ ಬಿದ್ದಿದ್ದಾರೆ ಎಂದರು.

ರೈತರನ್ನು ದ್ವೇ ಷಿಸುವ ಇಂಡಿಯಾ ಮೈತ್ರಿಕೂಟ ಚೌ ಧರಿ ಚರಣ್ ಸಿಂಗ್ ಅವರಿಗೆ ಸೂಕ್ತ ಗೌರವವನ್ನೂ ನೀಡಲಿಲ್ಲ ಎಂದರು. ನಾನು ಕೇವಲ ಭ್ರಷ್ಟರ ಬಗ್ಗೆ ತನಿಖೆ ನಡೆಸುತ್ತಿಲ್ಲ,ಅವರು ಕದ್ದ ಸಂಪತ್ತನ್ನು ಜನರಿಗೆ ಹಿಂದಿರುಗಿಸುತ್ತಿದ್ದೇ ನೆ ಎಂದು ಮೋದಿ ಹೇಳಿದರು.

Comments (0)
Add Comment