ಎಮ್ಮೆ ಹಾಲು ಮಾರಾಟ ಸ್ಥಗಿತಕ್ಕೆ ಕೆಎಂಎಫ್ ಚಿಂತನೆ!

ಬೆಂಗಳೂರು: ಬೇಡಿಕೆ ಇಳಿಕೆಯಾದ ಕಾರಣ ಎಮ್ಮೆ ಹಾಲು ಮಾರಾಟ ಸ್ಥಗಿತಕ್ಕೆ ಕರ್ನಾಟಕ ಹಾಲು ಮಹಾ ಮಂಡಳಿ ಚಿಂತನೆ ನಡೆಸಿದೆ. ಕೆಲ ತಿಂಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದ ಎಮ್ಮೆ ಹಾಲಿಗೆ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಮಾರಾಟವನ್ನು ಸ್ಥಗಿತಗೊಳಿಸುವ ಸಂಬಂಧ ಕೆಎಂಎಫ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಎಮ್ಮೆ ಹಾಲಿಗೆ ಬೇಡಿಕೆ ಕಡಿಮೆಯಾಗಿದ್ದು, ಪ್ರತಿದಿನ ಕೇವಲ ಎರಡು ಸಾವಿರ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ಇದರಿಂದ ಸಂಸ್ಥೆಗೆ ಲಾಭಕ್ಕಿಂತ ನಷ್ಟವಾಗುತ್ತಿದ್ದು, ಹೀಗಾಗಿ ಎಮ್ಮೆ ಹಾಲಿನ ಮಾರಾಟ ಸ್ಥಗಿತಗೊಳಿಸಲು ಕೆಎಂಎಫ್ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನು ಎಮ್ಮೆ ಹಾಲಿನ ಬಗ್ಗೆ ಹೇಳುವುದಾದರೇ, ಎಮ್ಮೆ ಹಾಲಿನ ಅತಿದೊಡ್ಡ ಉತ್ಪಾದಕ ಮತ್ತು ಗ್ರಾಹಕ ಎರಡೂ ಸ್ಥಾನಗಳು ಭಾರತಕ್ಕೇ ಮೀಸಲಾಗಿದೆ. ದಪ್ಪನಾದ ಮತ್ತು ಕೆನೆಬಣ್ಣದ ಪರಿಪೂರ್ಣ ಎಮ್ಮೆ ಹಾಲನ್ನು ಪನೀರ್ ಅಥವಾ ಕಾಟೇಜ್ ಚೀಸ್, ಮೊಸರು, ಬೆಣ್ಣೆ ಮತ್ತು ತುಪ್ಪ ಅಥವಾ ಸಂಸ್ಕರಿಸಿದ ಬೆಣ್ಣೆಯನ್ನು ತಯಾರಿಸಲು ಬಳಸಲಾಗುತ್ತದೆ. ಎಮ್ಮೆಯ ಹಾಲು ಹೆಚ್ಚಿನ ಪೆರಾಕ್ಸಿಡೀಕರಣ (peroxidizing)ಚಟುವಟಿಕೆಯನ್ನು ಸಹ ಹೊಂದಿದೆ, ಇದು ಹಾಲನ್ನು ಹೆಚ್ಚು ಸಮಯ ಸಂಗ್ರಹಿಸಿಡಲು ಸಹಾಯ ಮಾಡುತ್ತದೆ. ಮಕ್ಕಳು, ವಯಸ್ಕರು ಮತ್ತು ವೃದ್ದರೂ ಸೇರಿದಂತೆ ಎಲ್ಲಾ ವಯಸ್ಸಿನ ವ್ಯಕ್ತಿಗಳು ಎಮ್ಮೆ ಹಾಲನ್ನು ಸುರಕ್ಷಿತವಾಗಿ ಸೇವಿಸಬಹುದು. ಪರಿಪೂರ್ಣ ಎಮ್ಮೆಯ ಹಾಲಿನಲ್ಲಿ ವಿಟಮಿನ್ B12ಮತ್ತು ರೈಬೋಫ್ಲೇವಿನ್ ನಂತಹ ವಿಟಮಿನ್ನುಗಳಿವೆ, ಇವೆರಡೂ ಆರೋಗ್ಯಕ್ಕೆ ಒಳ್ಳೆಯದು. ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರ ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಟಮಿನ್ B12 ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಸಮಸ್ಯೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ವಿಟಮಿನ್ A,ವಿಟಮಿನ್ C,ವಿಟಮಿನ್ B6,ನಿಯಾಸಿನ್, ಫೋಲೇಟ್ ಮತ್ತು ಥಯಾಮಿನ್ ಅನ್ನು ಸಹ ಹೊಂದಿದೆ. ಪ್ರೋಟೀನ್ ಸೇವಿಸಲು ಪ್ರೋಟೀನ್ ಶೇಕ್ ಎಂಬ ದುಬಾರಿ ಮತ್ತು ಆಕರ್ಷಕ ಪೇಯವನ್ನು ನೀವು ಅಪೇಕ್ಷಿಸುತ್ತಿದ್ದರೆ ನೀವು ಇದರ ಬದಲಿಗೆ ಎಮ್ಮೆ ಹಾಲನ್ನು ಕುಡಿಯಲು ಪ್ರಾರಂಭಿಸಿ. ಇದರಲ್ಲಿ ಎಲ್ಲಾ 9 ಅಮೈನೋ ಆಮ್ಲಗಳಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಒಂದು ಕಪ್ ಎಮ್ಮೆ ಹಾಲಿನಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇದೆ. ವಯಸ್ಸಿಗೆ ಸಂಬಂಧಿಸಿದ ಸ್ನಾಯುಗಳ ಸವೆತವನ್ನು ತಡೆಯಲು ಹಿರಿಯರು ಎಮ್ಮೆ ಹಾಲನ್ನು ಕುಡಿಯಲು ಪ್ರಾರಂಭಿಸಬೇಕು.

Comments (0)
Add Comment