ಎರಡು ಅನಾಮಧೇಯ ಬಾಕ್ಸ್ ಗಳು ಪತ್ತೆ-ರೈಲು ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ

ಶಿವಮೊಗ್ಗ :ರೈಲು ನಿಲ್ದಾಣದಲ್ಲಿ ಅನಾಮಧೇಯ ಎರಡು ಬಾಕ್ಸ್ ಗಳು ಪತ್ತೆಯಾಗಿದ್ದು ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆಯನ್ನು ನಡೆಸುತ್ತಿದೆ.

ರೈಲು ನಿಲ್ದಾಣದ ಪಾರ್ಕಿಗ್ ಏರಿಯಾದಲ್ಲಿ ಶನಿವಾರದಂದು ಈ ಎರಡು ಬಾಕ್ಸ್ ಗಳು ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಾಕ್ಸ್‌ ಇರುವ ಸ್ಥಲದಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ನಿಗಾ ವಹಿಸಿದ್ದಾರೆ ಎನ್ನಲಾಗಿದೆ. ಈ ಎರಡು ಅನಾಮಧೇಯ ಬಾಕ್ಸ್ ಗಳು ಪತ್ತೆಯಾದ ಹಿನ್ನೆಲೆ ರೈಲ್ವೇ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ. ಬಾಕ್ಸ್ ಗಳ ಮೇಲೆ ಫುಡ್ ಗ್ರೈನ್ಸ್ ಆಂಡ್ ಶುಗರ್ಸ್ ಎಂದು ಬರೆಯಲಾಗಿದೆ. ಆದರೆ ಆ ಬಾಕ್ಸ್ ನ ಒಳಗೆ ಏನಿದೆ ಎಂಬುದು ತಿಳಿದು ಬಂದಿಲ್ಲ.

Comments (0)
Add Comment