ಎರಡು ತಿಂಗಳ ಬಳಿಕ ಕೆನಡಾದ ಪ್ರಜೆಗಳಿಗೆ ಇ-ವೀಸಾ ಸೇವೆ ಆರಂಭ

ನವದೆಹಲಿ: ಭಾರತವು ಸುಮಾರು ಎರಡು ತಿಂಗಳ ನಂತರ ಕೆನಡಾದ ಪ್ರಜೆಗಳಿಗೆ ಇ- ವೀಸಾ ಸೇವೆಗಳನ್ನು ಆರಂಭಿಸಿದೆ ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಬುಧವಾರ ತಿಳಿಸಿದೆ.

ಜೂನ್‌ನಲ್ಲಿ ನಡೆದ ಕೆನಡಾದ ಪ್ರಜೆಯಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್ ಗಳು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು.

ಈ ಆರೋಪದ ನಂತರ ಭುಗಿಲೆದ್ದ ರಾಜತಾಂತ್ರಿಕ ಗದ್ದಲದ ನಡುವೆ ಸೆಪ್ಟೆಂಬರ್ 21 ರಂದು ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಿತ್ತು.

ಆದರೆ ಇದೀಗಾ ಎರಡು ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತವು ಕೆನಡಾದಲ್ಲಿ ಪ್ರವೇಶ ಸೇರಿದಂತೆ ವ್ಯಾಪಾರ, ವೈದ್ಯಕೀಯ ವೀಸಾ ಮತ್ತು ಕಾನ್ಫರೆನ್ಸ್ ವೀಸಾ ಸೇವೆಯನ್ನು ಪುನರಾರಂಭಿಸಲಿದೆ.

Comments (0)
Add Comment