ಏರ್ ಗನ್, ಚಾಕು ಹಿಡಿದು ಪ್ರಾರ್ಥಮಿಕ ಶಾಲಾ ಮಕ್ಕಳ ಹೊಡೆದಾಟಕ್ಕೆ ಶಿಕ್ಷಕ ವರ್ಗ ತಲ್ಲಣ..!

ರಾಯಚೂರು:ಹೊಸ ವರ್ಷಾಚರಣೆ ವೇಳೆ ರಾಯಚೂರು ನಗರದ ಪ್ರೌಢ ಶಾಲಾ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಏರ್ ಗನ್, ಬಟನ್ ಚಾಕು, ಡ್ರಾಗರ್, ಬೆತ್ತ ಹಿಡಿದು ಹೊಡೆದಾಡಿಕೊಂಡಿರುವ ಭಯಾನಕ ಘಟನೆ ವರದಿಯಾಗಿದೆ.

ಶಾಲಾ ಮಕ್ಕಳ ಈ ಘಟನೆ ಪೋಷಕರನ್ನು, ಶಿಕ್ಷಕ ವರ್ಗವನ್ನು ತಲ್ಲಣಗೊಳಿಸಿದೆ.ನಗರದ ಜ್ಯೋತಿ ಕಾಲೊನಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಶಾಲೆಯ ಗೇಟ್ ಹೊರಗೆ ವಿದ್ಯಾರ್ಥಿಗಳು ಏರ್ ಗನ್, ಚಾಕು ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಓರ್ವ ವಿದ್ಯಾರ್ಥಿ ಕೈಗೂ ಗಾಯವಾಗಿವೆ. ಮಕ್ಕಳ ಈ ರೀತಿಯ ಹೊಡೆದಾಟದಿಂದ ಪೋಷಕರು ಆತಂಕಗೊಂಡಿದ್ದಾರೆ.

9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ  ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಇಂದು 9ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿ ತಿನಿಸು ತರಲು ಶಾಲೆಯಿಂದ ಹೊರಗಡೆ ಬಂದಿದ್ದಾನೆ.

ಆಗ 9ನೇ ತರಗತಿ ವಿದ್ಯಾರ್ಥಿ ತಪ್ಪಿಸಿಕೊಂಡಿದ್ದು, ಬೆರಳಿಗೆ ಗಾಯವಾಗಿದೆ. ಇದನ್ನು ಕಂಡ ಸ್ಥಳಿಯರು ಬಾಲಕರನ್ನು ಬೆದರಿಸಿದ್ದಾರೆ. ಆಗ ಆರೋಪಿಗಳು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Comments (0)
Add Comment