ಕರುನಾಡಿನಲ್ಲಿಂದು ನಮೋ ಸಂಚಾರ : ಫಸ್ಟ್ ಟೈಂ ಜೆಡಿಎಸ್-ಬಿಜೆಪಿ ಜಂಟಿ ಸಮಾವೇಶ

ಬೆಂಗಳೂರು: ರಾಜ್ಯ ಲೋಕಸಭಾ ಚುನಾವಣಾ ಪ್ರಚಾರ ಕಣಕ್ಕೆ ಇಂದು ಪ್ರಧಾನಿ ಮೋದಿ ಅವರ ರಂಗ ಪ್ರವೇಶವಾಗಿದೆ. ಇಂದು ಮೈಸೂರಿನಲ್ಲಿ ನಡೆಯಲಿರುವ ಬಹಿರಂಗ ಸಭೆಯ ವೇದಿಕೆಯಲ್ಲಿ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಒಂದೂಗೂಡುವ ಮೂಲಕ ಎನ್‌ಡಿಎ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. ಮೈಸೂರು,ಚಾಮರಾಜನಗರ,ಮಂಡ್ಯ ಹಾಗೂ ಹಾಸನ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಹಾಗೂ ದೇವೇಗೌಡರು ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಭದ್ರಕೋಟೆ ಮಂಗಳೂರಿನಲ್ಲಿಯೂ ಮೋದಿ ಸಂಜೆ ರೋಡ್‌ ಶೋ ನಡೆಸಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇತಿಹಾಸದಲ್ಲೇ ಫಸ್ಟ್‌ ಟೈಂ ಒಂದೇ ವೇದಿಕೆಯಲ್ಲಿ ಹಾಲಿ-ಮಾಜಿ ಪ್ರಧಾನಿಗಳ ಸಂಗಮ ಆಗ್ತಿದೆ. ಇಲ್ಲಿವರೆಗೂ 5 ಸಲ ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ಕೊಟ್ಟಿದ್ರು. ಈಗ 6ನೇ ಬಾರಿಗೆ ಮೈಸೂರಿನ ಜನತೆಯನ್ನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಾರಿ ಅಭಿವೃದ್ಧಿ ಮಂತ್ರದ ಜೊತೆ NDA ಗೆಲ್ಲಿಸಿ ಅಂತ ಮತದಾರರ ಮನಗೆಲ್ಲೋಕೆ ಮೋದಿ ಬರ್ತಿದ್ದಾರೆ. ಮೋದಿ ‘ಸಂಚಾರ’ ಮಧ್ಯಾಹ್ನ 3.30: ಮೈಸೂರು ಮಂಡಕಳ್ಳಿ ಏರ್​​ಪೋರ್ಟ್‌ಗೆ ಆಗಮನ ಸಂಜೆ 4.10: ಮೈಸೂರು ಮಹಾರಾಜ ಮೈದಾನಕ್ಕೆ ಮೋದಿ ಆಗಮನ ಸಂಜೆ 4.15: ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್‌ ಪರ ಮತಯಾಚನೆ ಸಂಜೆ 5.30: ಮೈಸೂರು ಸಮಾವೇಶ ಮುಗಿಸಿ ಮಂಗಳೂರಿಗೆ ಪ್ರಯಾಣ ಸಂಜೆ 6.45: ಮಂಗಳೂರು ಏರ್‌ಪೋರ್ಟ್​​‌ಗೆ ಮೋದಿ ಆಗಮನ ರಾತ್ರಿ 7.45: ಲೇಡಿಹಿಲ್ ನಾರಾಯಣಗುರು ವೃತ್ತದಿಂದ ರೋಡ್‌ಶೋ ರಾತ್ರಿ 8.15: ನವಭಾರತ ಸರ್ಕಲ್‌ನಲ್ಲಿ ಮೋದಿ ರೋಡ್ ಶೋ ಅಂತ್ಯ ಪ್ರಧಾನಿ ಮೋದಿ ಪ್ರಚಾರ ಇಂದಿನ ನರೇಂದ್ರ ಮೋದಿಯವರ ಸಮಾವೇಶ, ಮತಯಾಚನೆ ಬರೀ ಬಿಜೆಪಿಗಷ್ಟೇ ಸೀಮಿತವಾಗಿಲ್ಲ. ಜೆಡಿಎಸ್‌ ಅಭ್ಯರ್ಥಿಗಳ ಪರವೂ ಮೋದಿ ಮತಯಾಚನೆ ಮಾಡ್ತಿದ್ದಾರೆ.

Comments (0)
Add Comment