ಕಲಿಕಾ ಭಾಗ್ಯ ಯೋಜನೆ: ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಶೈಕ್ಷಣಿಕ ಸಹಾಯಧನ..! ಕೂಡಲೇ ಚೆಕ್‌ ಮಾಡಿ

ಕಲಿಕಾ ಭಾಗ್ಯ ಯೋಜನೆ

ಕರ್ನಾಟಕ ಕಟ್ಟಡ & ಇತರ ಕಾರ್ಮಿಕರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಲು ಕಲಿಕಾ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಅತಿ ಸಣ್ಣ ವಯಸ್ಸಿನಿಂದ ಅಂದರೆ ಆರಂಭಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಪಡೆದುಕೊಳ್ಳುವರೆಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುಕೊಳ್ಳುವವರ ಕಾರ್ಮಿಕರ ಕುಟುಂಬದ ಮಕ್ಕಳಿಗೆ, ಅಗತ್ಯ ಇರುವ ಆರ್ಥಿಕ ನೆರವನ್ನು ಒದಗಿಸುವ ಸಲುವಾಗಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದಾಗಿದೆ.

ಕಲಿಕಾ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಸಂಬಂಧಪಟ್ಟ ಕಚೇರಿಗಳಿಗೆ ಹೋಗಿ ನೇರವಾಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಕಟ್ಟಡ ಕೆಲಸದಲ್ಲಿ ತೊಡಗಿಕೊಂಡ ಕುಟುಂಬದ ದೃಢಿಕರಣ ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದಾಗಿದೆ.

ಎಷ್ಟು ಸ್ಕಾಲರ್ಶಿಪ್ ಹಣ ನಿಗದಿಪಡಿಸಲಾಗಿದೆ ಗೊತ್ತಾ?

3-5 ವರ್ಷದ ನರ್ಸರಿ ಮಕ್ಕಳಿಗೆ ವಾರ್ಷಿಕ ರೂ. 5,000
1-4 ತರಗತಿ ವಿದ್ಯಾರ್ಥಿಗಳಿಗೆ ರೂ 5,000
5- 8 ನೇ ತರಗತಿಯ ವಿದ್ಯಾರ್ಥಿಗಳಿಗೆ ರೂ 8,000
9 -10 ನೇ ತರಗತಿ ವಿದ್ಯಾರ್ಥಿಗಳಿಗೆ ರೂ 12,000
PUC ವಿದ್ಯಾರ್ಥಿಗಳಿಗೆ ರೂ 15,000
ಡಿಪ್ಲೋಮೋ ವಿದ್ಯಾರ್ಥಿಗಳಿಗೆ ರೂ 20,000
ಡಿ ಎಡ್ ವಿದ್ಯಾರ್ಥಿಗಳಿಗೆ 25,000 ರೂ.
ಬಿ ಎಡ್ ವಿದ್ಯಾರ್ಥಿಗಳಿಗೆ ರೂ 35000
ಪದವಿ ವಿದ್ಯಾರ್ಥಿಗಳಿಗೆ ರೂ. 25000.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ 60,000.
IIT, IIM ಮೊದಲಾದ ಕೋರ್ಸ್ಗಳಿಗೆ ಪಾವತಿಸಲಾಗಿರುವ ಬೋಧನಾ ಶುಲ್ಕವನ್ನು ಸ್ಕಾಲರ್ಶಿಪ್ ನೀಡಲಾಗುವುದು.

Comments (0)
Add Comment