ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕರ್ತರ ಜಮಾವಣೆ ; ಚಿತ್ರದುರ್ಗ ಲೋಕಸಭಾ ಆಕಾಂಕ್ಷಿಗಳು ಶಕ್ತಿ ಪ್ರದರ್ಶನ .!

 

ಚಿತ್ರದುರ್ಗ : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಅಭ್ಯರ್ಥಿಗಳ ಆನ್ವಷಣೆಯಲ್ಲಿದೆ. ಈ ಹಿನ್ನಲೆಯಲ್ಲಿ ಇಂದು ನಗರದ ಕಾಂಗ್ರಸ್ ಕಚೇರಿಯ ಮುಂಬಾಗದಲ್ಲಿ ಸರ್ಕಾರದ ಸಮಾಜ ಕಲ್ಯಾಣ ಸಚಿವರು, ಚಿತ್ರದುರ್ಗ ಲೋಕಸಭಾ ಚುನಾವಣಾ ವೀಕ್ಷಕರಾದ ಡಾ.ಎಚ್.ಸಿ.ಮಹಾದೇವಪ್ಪ ಸಭೆಯನ್ನು ನಡೆಸಿದರು.

ಸಭೆಯ ಹಿನ್ನೆಲೆಯಲ್ಲಿ ನಗರದ ಒನಕೆ ಓಬವ್ವ ವೃತ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ ತುಂಬಿದ್ದು,. ಲೋಕಸಭೆ ಟಿಕೇಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಜೈಕಾರಗಳ ಮೂಲಕ ಸಭೆಗೆ ಆಗಮಿಸುತ್ತಿದ್ದುದು ವಿಶೇಷವಾಗಿತ್ತು ಇದರಲ್ಲಿ ಕೆಲವರು ವಿವಿಧ ಜಾನಪದ ಕಲಾಮೇಳಗಳೊಂದಿಗೆ ಆಗಮಿಸಿದರೆ ಮತ್ತೆ ಕೆಲವರು ಪಟಾಕಿಯನ್ನು ಸಿಡಿಸುವುದರ ಮೂಲಕ ತಮ್ಮ ಬರವನ್ನು ತೋರಿಸಿಕೊಂಡರು.

ಲೋಕಸಬಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ಜನ ಹೆಚ್ಚು ಸೇರುತ್ತಿದ್ದರಿಂದ ಪೊಲೀಸರು ಬಿಗಿ ಭದ್ರತೆಯನ್ನು ಮಾಡಿದ್ದು, ಡಿಸಿ ಕಚೇರಿ ಕಡೆಗೆ ಬರುತ್ತಿರುವ ಎಲ್ಲಾ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ತಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಹಾದೇವಪ್ಪ ಇಲ್ಲಿ ನಾನು ಆಕಾಂಕ್ಷಿಗಳಿಂದ ಅರ್ಜಿಗಳನ್ನು ಮಾತ್ರ ತೆಗೆದುಕೊಂಡು ಹೋಗಲು ಬಂದಿದ್ದೇನೆ ಇಲ್ಲಿಯೃ ಟೀಕೇಟ್ ಸಿಗುತ್ತದೆ ಎಂಬ ಭ್ರಮೆ ಬೇಡ ಇಲ್ಲಿ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿಗೆ ತೆಗೆದುಕೊಂಡು ಹೋಗಿ ಅಲ್ಲಿ ತೀರ್ಮಾನ ಮಾಡಿ ನಂತರ ಪಕ್ಷದ ಹೈಕಮಾಂಡ್ ಬಳಿ ತೆಗೆದುಕೊಂಡು ಹೋಗಲಾಗುವುದು ಇಲ್ಲಿ ಎಲ್ಲರ ಅಭೀಪ್ರಾಯವನ್ನು ಸಹಾ ತೆಗೆದುಕೊಳ್ಳಲಾಗುವುದು ಬೇರೆ ಪಕ್ಷದವರಂತೆ ಎಲ್ಲೂ ಕುಳಿತು ಅಭ್ಯರ್ಥಿಗಳನ್ನು ನಮ್ಮ ಪಕ್ಷ ಆಯ್ಕೆ ಮಾಡುವುದಿಲ್ಲ ಆಕಾಂಕ್ಷಿಗಳಿಂದ ಅರ್ಜಿಯನ್ನು ಪಡೆದು ಸ್ಥಳಿಯ ಮುಖಂಡರು, ಶಾಸಕರು, ಪಕ್ಷದ ಮುಖಂಡರು, ಮಾಜಿ ಸಚಿವರು, ಪಕ್ಷ ಕಾರ್ಯಕರ್ತರಿಗೆ ಅಭೀಪ್ರಾಯಗಳನ್ನು ಪಡೆಯುವುದರ ಮೂಲಕ ಪಟ್ಟಿಯನ್ನು ತಯಾರು ಮಾಡಲಾಗುವುದು ಎಂದರು.

 

ಡಜನ್ಗಿಂತ ಹೆಚ್ಚು ಆಕಾಂಕ್ಷಿಗಳು : ಚಿತ್ರದುರ್ಗ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಸಚಿವರಾದ ಮಹಾದೇವಪ್ಪ ರವರು ಚಿತ್ರದುರ್ಗಕ್ಕೆ ಆಗಮಿಸಿದಾಗ ಚುನಾವಣಾ ಆಕಾಂಕ್ಷಿಗಳಾಗಿ ಒಂದು ಡಜನ್ ಗಿಂತ ಹೆಚ್ಚು ಆಕಾಂಕ್ಷಿಗಳು ಮಹಾದೇವಪ್ಪರವರ ಮುಂದೆ ತಮ್ಮ ಹೆಸರುಗಳನ್ನು ತಿಳಿಸಿದರು.

ಇದರಲ್ಲಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಬಿ.ಎನ್.ಚಂದ್ರಪ್ಪ, ಜಿ.ಎಸ್.ಮಂಜುನಾಥ್, ಪಿ.ರಘು, ವಿನಯ ತಿಮ್ಮಾಪುರ, ಹನುಮಂತಪ್ಪ ಗೋಡೆಮನೆ, ಪಾವಗಡ ಕುಮಾರಸ್ವಾಮಿ, ಎಂ.ರಾಮಪ್ಪ, ಸುನೀಲ್ಕುಮಾರ್, ಓ.ಶಂಕರ್, ಡಿ.ಎನ್. ಮೈಲಾರಪ್ಪ, ಹೆಚ್.ಸಿ. ನಿರಂಜನಮೂರ್ತಿ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ಡಿ.ಸುಧಾಕರ್, ಶಾಸಕರುಗಳಾದ ಜಿ.ವಿ.ಗೋವಿಂದಪ್ಪ, ರಘುಮೂರ್ತಿ, ಎನ್.ವೈ ಗೋಪಾಲಕೃಷ್ಣ, ಮಾಜಿ ಸಚಿವರಾದ ಹೆಚ್.ಅಂಜನೇಯ, ಮಾಜಿ ಶಾಸಕರಾಧ ಉಮಾಪತಿ, ಡಿಸಿಸಿ ಅಧ್ಯಕ್ಷರಾಧ ತಾಜ್ ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಮಹಿಳಾ ಘಟಕದ ಅಧ್ಯಕ್ಚರಾದ ಶ್ರೀಮತಿ ಗೀತಾ ನಂದಿನಿ ಗೌಡ, ಚಳ್ಳಕೆರೆ ನಗರಸzಭಾ ಸದಸ್ಯರಾದ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕರ್ತರ ಜಮಾವಣೆ ; ಚಿತ್ರದುರ್ಗ ಲೋಕಸಭಾ ಆಕಾಂಕ್ಷಿಗಳು ಶಕ್ತಿ ಪ್ರದರ್ಶನ .!
Comments (0)
Add Comment