ಕಾಂಗ್ರೆಸ್ ಗೆದ್ದರೆ ಸಂಪತ್ತಿನ ಸಮಾನ ಹಂಚಿಕೆ: ರಾಹುಲ್ ಗಾಂಧಿ.!

 

ಹೈದರಬಾದ್: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಕುರಿತು ಸರ್ವೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಹೈದರಾಬಾದ್ ನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ಮೊದಲಿಗೆ ನಾವು ದೇಶ ವ್ಯಾಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯದ ಪ್ರಮಾಣ ತಿಳಿಯಲು ಜಾತಿ ಗಣತಿ ನಡೆಸುತ್ತೇವೆ. ಜಾತಿ ಗಣತಿಯ ನಂತರ ಆರ್ಥಿಕ, ಸಾಂಸ್ಥಿಕ ಸಮೀಕ್ಷೆ ನಡೆಸಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯ ಶೇಕಡ 90ರಷ್ಟು ಪಾಲು ಹೊಂದಿದೆ. ಆದರೆ ಆ ಜನರಿಗೆ ಅವರ ಪಾಲಿನ ಉದ್ಯೋಗದ ಹಕ್ಕು ಸಿಕ್ಕಿಲ್ಲ. ಕೇಂದ್ರದಲ್ಲಿ 90 ಐಎಎಸ್ ಅಧಿಕಾರಿಗಳಿದ್ದು, ಇವರಲ್ಲಿ ಮೂವರು ಒಬಿಸಿ, ಮೂವರು ದಲಿತರು, ಒಬ್ಬರು ಆದಿವಾಸಿಗಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಗೆದ್ದರೆ ಸಂಪತ್ತಿನ ಸಮಾನ ಹಂಚಿಕೆ: ರಾಹುಲ್ ಗಾಂಧಿ.!
Comments (0)
Add Comment