ಕಾಂಗ್ರೆಸ್ ನ್ಯಾಯ ಯಾತ್ರೆಗೆ ಇಂದು ತೆರೆ

ನವದೆಹಲಿ: ಜ. 14 ರಂದು ಮಣಿಪುರದಿಂದ ಆರಂಭಗೊಂಡಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮುಂಬೈ ತಲುಪಿದ್ದು, ಇಂದು ಸಂಪನ್ನವಾಗಲಿದೆ.

ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಹೋದರ ರಾಹುಲ್ ಗಾಂಧಿ ಜತೆಗೆ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮುಂಬೈನ ಧಾರಾವಿಗೆ ಆಗಮಿಸಿದ್ದು , ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕವಾದ ದಾದರ್ನ ಚೈತ್ಯ ಭೂಮಿಯಲ್ಲಿ ಯಾತ್ರೆ ಮುಕ್ತಾಯಗೊಳಿಸಿದರು. ಇಂದು ಮುಂಬೈನ ಮಣಿ ಭವನದಿಂದ ಆಗಸ್ಟ್ ಕ್ರಾಂತಿ ಮೈದಾನದವರೆಗೆ ಭಾನುವಾರ ರಾಹುಲ್ ನ್ಯಾಯ ಸಂಕಲ್ಪ ಪಾದಯಾತ್ರೆ ನಡೆಸಲಿದ್ದಾರೆ.

ಈ ವೇಳೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಅನಂತರ ಕಾರ್ಯಕರ್ತರ ಜತೆ ರಾಹುಲ್ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಮುನ್ನಡೆಸಿದ್ದ ರಾಹುಲ್ ಗಾಂಧಿ, ಒಟ್ಟು 16 ರಾಜ್ಯಗಳು ಮತ್ತು110 ಜಿಲ್ಲೆಗಳಲ್ಲಿ ಸಂಚರಿಸಿ ಪ್ರಸ್ತುತ ಮಹಾರಾಷ್ಟ್ರ ದಲ್ಲಿ ಮುಕ್ತಾಯಗೊಳಿಸಿದ್ದರು. ಈ ಹಿಂದೆ ಇದ್ದ ವೇಳಾಪಟ್ಟಿಯಂತೆ ಮಾ.20 ರಂದು ಈ ಯಾತ್ರೆ ಮುಕ್ತಾಯವಾಗಬೇಕಿತ್ತು. ಆದರೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ 30ದಿನ ಮುಂಚಿತವಾಗಿ ಯಾತ್ರೆ ಪೂರ್ಣಗೊಳಿಸಲಾಗುತ್ತಿದೆ .

Comments (0)
Add Comment