‘ಕಾಂಗ್ರೆಸ್ ಪರಿಸ್ಥಿತಿ ಬರೀ ಆರು ತಿಂಗಳಲ್ಲಿ ಭೀಕರವಾಗಿದೆ’- ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ. ಆರು ತಿಂಗಳಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿಗೆ 40% ಸರ್ಕಾರ ಎನ್ನುತ್ತಿದ್ದರು. ಆದರೆ ಕಾಂಗ್ರೆಸ್ ಪರಿಸ್ಥಿತಿ ಬರೀ ಆರು ತಿಂಗಳಲ್ಲಿ ಭೀಕರವಾಗಿದೆ. ನೆಲ ಕಚ್ಚುವ ಪರಿಸ್ಥಿತಿ ತಲುಪಲಿದೆ ಎಂದು ಟೀಕಿಸಿದ್ದಾರೆ.

ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಲು ಅನುಮತಿ ಕೊಡುತ್ತಿಲ್ಲ. ಅದಕ್ಕೆ ಪೆಂಡಿಂಗ್ ಅಂತ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಮುನ್ನಡೆ ಅಥವಾ ಹಿನ್ನಡೆ ಅದು ಅವರಿಗೆ ಬಿಟ್ಟ ವಿಚಾರ. ಇದರ ಅರ್ಥ ಕೋರ್ಟ್ ಒಪ್ಪಿದೆ ಅಂದಲ್ಲ. ತನಿಖೆ ಮುಂದುವರೆಯಲಿದೆ ಎಂದು ಹೇಳಿದರು.

Comments (0)
Add Comment