‘ಕಾಂಗ್ರೆಸ್ ಸರ್ಕಾರ ಮೇ ತಿಂಗಳ ಬಳಿಕ ಪತನ’ -ಹೆಚ್‍ಡಿಕೆ

ಮಂಡ್ಯ :ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಇರುವುದಿಲ್ಲ, ಮೇ ಬಳಿಕ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.

ಕೆ.ಆರ್.ಪೇಟೆಯ ಬೆಳತೂರು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಜನರ ಧ್ವನಿಯಾಗಿ ಇರುತ್ತೇನೆ.

ಈ ಕಾಂಗ್ರೆಸ್‌ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಕಾಲ ಇರುವುದಿಲ್ಲ. ಮೇ ತಿಂಗಳ ಬಳಿಕ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Comments (0)
Add Comment