ಕಾಂತಾರ ಚಿತ್ರಕ್ಕೆ 1 ವರ್ಷ ಪ್ರಯುಕ್ತ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್

ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ 1 ವರ್ಷ ಖುಷಿಯಲ್ಲಿಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.

ಸಣ್ಣ ಬಜೆಟ್ ನಲ್ಲಿ ಕಾಂತಾರ ಸಿನೆಮಾ ನಿರ್ಮಾಣವಾಗಿದ್ದು ಚಿತ್ರ ಗಳಿಸಿದ್ದು ಮಾತ್ರ ಬರೋಬ್ಬರಿ 400 ಕೋಟಿಗಿಂತಲೂ ಅಧಿಕ ಮೊತ್ತ.

ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಕಾಂತಾರ ಚಿತ್ರದಲ್ಲಿ ನಟಿಸಿ ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಹಚ್ಚೊತ್ತಿದ್ರು.

ನಿರೀಕ್ಷೆಗೂ ಮೀರಿ ನೇಮು-ಫೇಮು ಎಲ್ಲವೂ ಸಿಕ್ಕಿತು.

ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಈ ಹಿನ್ನಲೆ ನಾಳೆ ಸೆ. 30 ರಂದು ಬೆಳಿಗ್ಗೆ ಕಾಂತಾರ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡ ‘ವರಾಹ ರೂಪಂ’ ಹಾಡಿನ ವಿಡಿಯೋ ವರ್ಷನ್ ರಿಲೀಸ್ ಆಗಲಿದೆ.

ಈ ಕುರಿತು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.

 

Comments (0)
Add Comment