ಕಾಟಪ್ಪನಹಟ್ಟಿ ಪಿ.ತಿಪ್ಪೇಸ್ವಾಮಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ.!

 

ಚಿತ್ರದುರ್ಗ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ, ಹಿರಿಯ ರಂಗನಿರ್ದೇಶಕ ಕಾಟಪ್ಪನಹಟ್ಟಿ ಪಿ.ತಿಪ್ಪೇಸ್ವಾಮಿ ಇವರಿಗೆ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಿ.ತಿಪ್ಪೇಸ್ವಾಮಿ ಇವರು ಮೂಲತಃ ಚಳ್ಳಕೆರೆ ತಾಲ್ಲೂಕಿನ ಗ್ರಾಮೀಣ ಪ್ರತಿಭೆ. 1975ರಲ್ಲಿ ಕಾಟಪ್ಪನಹಟ್ಟಿ ಶ್ರೀ ಕಾಟಂಲಿAಗೇಶ್ವರ ನಾಟಕ ಸಂಘವನ್ನು ಸ್ಥಾಪಿಸಿದ್ದಾರೆ. ಜಗಳೂರಜ್ಜ ಮಹಾಸ್ವಾಮಿ, ರಾಜಾವೀರ ಮದಕರಿ ನಾಯಕ ನಾಟಕವನ್ನು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ 1992ರಿಂದ ನಿರಂತರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ರಕ್ತರಾತ್ರಿ, ಭಕ್ತ ಸುಧನ್ವ, ದೇವಿ ಮಹಾತ್ಮೆ, ಕುರುಕ್ಷೇತ್ರ, ದಾನಶೂರ ಕರ್ಣ ಸೇರಿದಂತೆ ನೂರಾರು ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ರಾಜಾವೀರ ಮದಕರಿ ನಾಯಕ ಐತಿಹಾಸಿಕ ನಾಟಕ ದೆಹಲಿಯಲ್ಲಿ ಪ್ರದರ್ಶನಗೊಂಡಿದೆ. 2014-15ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ವಾಲ್ಮೀಖಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಂಗಸೌರಭ ಕಲಾ ಸಂಘದ ಸಿಜಿಕೆ ರಂಗ ಪುರಸ್ಕಾರ, ರಂಗಜAಗಮ ಪ್ರಶಸ್ತಿ, ರಂಗಚೇತನ ಮುಂತಾದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 75 ನೇ ಅ.ಭಾ.ಕ.ಸಾ.ಸಮ್ಮೇಳನದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿದ್ದರು. ಚಳ್ಳಕೆರೆ ತಾಲ್ಲೂಕು ಕ.ಸಾ.ಪರಿಷತ್ತಿನಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ಕಲಾವಿದರಿಗೆ ಮಾಶಾಸನ ಮಂಜೂರಾತಿಯಲ್ಲಿ ಶ್ರಮವಹಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮ್ಯಾಸನೇಡರ ಮೌಖಿಕ ಕಥನಗಳು ಕೃತಿಯನ್ನು ಸಂಪಾದಕತ್ವದಲ್ಲಿ ಮೂಡಿಬಂದಿದೆ.

ಕಾಟಪ್ಪನಹಟ್ಟಿ ಪಿ.ತಿಪ್ಪೇಸ್ವಾಮಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ.!
Comments (0)
Add Comment