ಕಿಡ್ನಾಪ್ ಆಗಿದ್ದ 6 ವರ್ಷ ಬಾಲಕಿ ಪತ್ತೆ..!

ಕೊಲ್ಲಂ: ಓಯೂರಿನಿಂದ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿಯನ್ನು ಸುಮಾರು 20 ಗಂಟೆಗಳ ನಂತರ ಮಂಗಳವಾರ ಪೊಲೀಸರು ಪತ್ತೆ ಮಾಡಿದ್ದಾರೆ.

ಬಾಲಕಿ ಅನಾಥ ಸ್ಥಿತಿಯಲ್ಲಿ ಆಶ್ರಮವೊಂದರ ಮೈದಾನದಲ್ಲಿ ಪತ್ತೆಯಾಗಿದ್ದಾಳೆ. ಮಗುವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಅಪಹರಣಕಾರರು ಬಳಸಿದ್ದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದರು. ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯೊಬ್ಬನ ರೇಖಾಚಿತ್ರವನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಾಲಕಿಯನ್ನು ಬಿಡಿಸಲು ಅಪಹರಣಕಾರರು 10 ಲಕ್ಷ ರೂ ಹಣವನ್ನು ಕೇಳಿದ್ದರು. ಈ ನಡುವೆ ಕೇರಳ ಪೊಲೀಸರು ಇಡೀ ರಾಜ್ಯದಲ್ಲಿ ಕಿಡ್ನಾಪರ್ಸ್ ಗಾಗಿ ತೀವ್ರ ಶೋಧ ನಡೆಸಿದ್ದರು.

ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಪೊಲೀಸರು ಮೂವರನ್ನು ತಿರುವನಂತಪುರಂನಿಂದ ಕಸ್ಟಡಿಗೆ ತೆಗೆದುಕೊಂಡಿದ್ದರೂ, ಅವರಲ್ಲಿ ಇಬ್ಬರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ. ಇದುವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾಲ್ವರ ಗ್ಯಾಂಗ್ ಪತ್ತೆಗೆ ತನಿಖಾ ತಂಡ ಮಹತ್ವದ ವಿವರಗಳನ್ನು ಸಂಗ್ರಹಿಸಿದೆ ಎಂದು ಐಜಿ ಸ್ಪರ್ಜನ್ ಕುಮಾರ್ ಹೇಳಿದ್ದಾರೆ. ಸಂಜೆ ಸುಮಾರು 4.30ಕ್ಕೆ ಘಟನೆ ನಡೆದಿದ್ದು ಬಾಲಕಿ ಅಬಿಗೆಲ್‌ ಸಾರಾ ರೇಜಿಳನ್ನು ಅಪಹರಣಕಾರರು ಕಾರಿನೊಳಕ್ಕೆ ಎಳೆದೊಯ್ದಿದ್ದರು. ಆಕೆಯ ಎಂಟು ವರ್ಷದ ಅಣ್ಣನನ್ನೂ ಅಪಹರಿಸುವ ಯತ್ನ ನಡೆಯಿತಾದರೂ ಆತ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ. ಆತನಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಈ ಘಟನೆ ನಡೆದಾಗ ಮಕ್ಕಳ ಹೆತ್ತವರಾದ ರೇಜಿ ಜಾನ್‌ ಮತ್ತು ಸಿಜಿ ಜಾನ್‌ ಮನೆಯಲ್ಲಿರಲಿಲ್ಲ. ಇಬ್ಬರೂ ವೃತ್ತಿಯಲ್ಲಿ ನರ್ಸ್‌ ಆಗಿದ್ದಾರೆ.

ಘಟನೆ ನಡೆದ ಮೂರು ಗಂಟೆಗಳ ತರುವಾಯ ಬಾಲಕಿಯ ತಾಯಿಗೆ ಮಹಿಳೆಯೊಬ್ಬಳಿಂದ ಫೋನ್‌ ಕರೆ ಬಂದು ರೂ 5 ಲಕ್ಷಕ್ಕೆ ಬೇಡಿಕೆಯಿರಿಸಲಾಗಿತ್ತು. ಮತ್ತೆ ರಾತ್ರಿ 9.30ಕ್ಕೆ ಬಂದ ಕರೆಯಲ್ಲಿ ರೂ 10 ಲಕ್ಷಕ್ಕೆ ಬೇಡಿಕೆ ಇರಿಸಲಾಗಿತ್ತು. ಮಗು ಸುರಕ್ಷಿತವಾಗಿದೆ ಎಂದೂ ಅಪಹರಣಕಾರರು ಹೇಳಿದ್ದಾರೆನ್ನಲಾಗಿದೆ. ಅಪಹೃತ ಮಗುವಿಗಾಗಿ ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಳಿ ಬಣ್ಣದ ಕಾರೊಂದು ತಮ್ಮನ್ನು ಕಟ್ಟಾಡಿ ಜಂಕ್ಷನ್‌ನಲ್ಲಿ ಅಡ್ಡಗಟ್ಟಿತ್ತು ಎಂದು ಬಾಲಕಿಯ ಸೋದರ ಹೇಳಿದ್ದಾನೆ. ಕಳೆದೆರಡು ದಿನಗಳಿಂದ ಬಿಳಿ ಸೆಡಾನ್‌ ಕಾರು ಆ ಪ್ರದೇಶದಲ್ಲಿ ಸಂಚರಿಸುತ್ತಿತ್ತು ಎಂಬ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ.

Comments (0)
Add Comment