ಕಿತ್ತಳೆ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ಕಡಿಮೆಯಾಗುತ್ತೆ ದೇಹ ತೂಕ

ಹೆಚ್ಚಿನವರಿಗೆ ಚಹಾ ಕುಡಿಯುವ ಚಟ ಇರುತ್ತದೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ನಿಮ್ಮ ಆರೋಗ್ಯದ ಜೊತೆಗೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.

ಕಿತ್ತಳೆ ಸಿಪ್ಪೆ ಚಹಾದಿಂದ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕಿತ್ತಳೆ ಸಿಪ್ಪೆಯಲ್ಲಿ ಹಲವು ಪೋಷಕಾಂಶಗಳಿರುತ್ತದೆ. ಇದರಿಂದ ಕೆಮ್ಮು, ನೆಗಡಿ, ಮತ್ತು ಶೀತ, ಎದೆನೋವು, ಮೂಗು ಸೋರುವ ಸಮಸ್ಯೆ ದೂರವಾಗುತ್ತದೆ.

ಹಾಗೇ ಇದು ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ. ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಬಾಣಲೆಯಲ್ಲಿ ಒಣಗಿದ ಕಿತ್ತಳೆ ಸಿಪ್ಪೆಯನ್ನು ಹಾಕಿ ನೀರು ಮತ್ತು ದಾಲ್ಚಿನ್ನಿ ಪುಡಿ ಹಾಕಿ 10 ನಿಮಿಷಗಳ ಕಾಲ ಕುದಿಸಿ. ಬಳಿಕ ಅದನ್ನು ಸೋಸಿ ಕುಡಿಯಿರಿ.

Comments (0)
Add Comment