ಕೃಷಿಭಾಗ್ಯ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ

 

ದಾವಣಗೆರೆ, ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ದಾವಣಗೆರೆ ತಾಲ್ಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನದಡಿ ಒದಗಿಸಲಾಗುವ ಘಟಕಗಳು: ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್‍ಸೆಟ್, ನೀರನ್ನು ಬೆಳೆಗೆ ಹಾಯಿಸಲು ಹನಿ, ತುಂತುರು ನೀರಾವರಿ ಪರಿಕರಗಳ ವಿತರಣೆ ಮಾಡಲಾಗುತ್ತದೆ.

ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ 1 ಎಕರೆ ಇರಬೇಕು, ಇಲ್ಲವಾದಲ್ಲಿ ರೈತರ 1 ಎಕರೆ ಸಾಗುವಳಿ ಕ್ಷೇತ್ರವು ಒಂದಕ್ಕಿಂತ ಹೆಚ್ಚು ಸರ್ವೆ ನಂಬರ್ ನಲ್ಲಿ ಒಂದೇ ಪ್ರದೇಶದಲ್ಲಿ ಇರುಬೇಕು. ಇದು ಕನಿಷ್ಠ ಐದು ಎಕರೆ ಪ್ರದೇಶದಿಂದ ನೀರು ಶೇಖರಣೆಯಾಗುವಂತಿರಬೇಕು. ಈಗಾಗಲೇ ಈ ಯೋಜನೆ, ಇತರೆ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ.

ಫಲಾನುಭವಿಯು ಒಂದೇ ಇಲಾಖೆಯಿಂದ ಹಾಗೂ ಒಂದೇ ಯೋಜನೆಯಿಂದ ಸಹಾಯಧನವನ್ನು ಪಡೆಯುವುದನ್ನು ಖಾತ್ರಿ ಪಡಿಸಲು ಯೋಜನೆಯನ್ನು ಅನುμÁ್ಠನಗೊಳಿಸುತ್ತಿರುವ ಇತರೆ ಇಲಾಖೆಗಳಿಂದ ದೃಢೀಕರಣ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ ತಿಳಿಸಿದ್ದಾರೆ.

ಕೃಷಿಭಾಗ್ಯ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ
Comments (0)
Add Comment