ಕೆನಡಾದಲ್ಲಿ ಲಘು ವಿಮಾನ ಪತನ – ಇಬ್ಬರು ಭಾರತೀಯರು ಸೇರಿ ಮೂರು ಮೃತ್ಯು

ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಅವಳಿ ಎಂಜಿನ್‌ನ ಲಘು ಪೈಪರ್ ಪಿಎ-34 ಸೆನೆಕಾ ವಿಮಾನವು ಮೋಟೆಲ್ ಬಳಿ ಮರಗಳು ಮತ್ತು ಪೊದೆಗಳಿಗೆ ಅಪ್ಪಳಿಸಿತು ಎಂದು ವರದಿಯಾಗಿದೆ. ಇನ್ನು ವ್ಯಾಂಕೋವರ್‌ ನಿಂದ ಪೂರ್ವಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಚಿಲ್ಲಿವಾಕ್‌ ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಪೈಲಟ್ ಮತ್ತು ಇತರ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

Comments (0)
Add Comment