ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ನ ರೇಖಾ‌ ಚಿತ್ರ ಬಿಡುಗಡೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್‌ನ ಸಿಸಿಟಿವಿ ಫೋಟೋವನ್ನು ಎನ್‌ಐಎ ಬಿಡುಗಡೆ ಮಾಡಿತ್ತು. ಇದೇ ಫೋಟೋವನ್ನು ಆಧಾರವಾಗಿಟ್ಟುಕೊಂಡು ಕಲಾವಿದ ಹರ್ಷ ಎಂಬುವರು ಬಾಂಬರ್‌ನ ರೇಖಾ ಚಿತ್ರ ಬಿಡಿಸಿದ್ದಾರೆ.

ಸಿಸಿಟಿವಿಯಲ್ಲಿ ಅಸ್ಪಷ್ಟವಾಗಿರುವ ಫೋಟೋವನ್ನು ಅಧಾರಿತವಾಗಿ ಇಮ್ಯಾಜನರಿ ಸ್ಕೆಚ್ ತಯಾರಿಸಿಲಾಗಿದೆ. ಸಂಪೂರ್ಣ ಮುಖದ ಸ್ಕೇಚ್ ಮಾಡಿರುವ ಸ್ಕೆಚ್ ಆರ್ಟಿಸ್ಟ್ ನಾಲ್ಕು ಆ್ಯಂಗಲ್ ನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಆರ್ಟಿಸ್ಟ್ ಹರ್ಷ ಇಮ್ಯಾಜಿನರಿ ಸ್ಕೆಚ್ ಅನ್ನು‌ ಸಾಮಾಜಿಕ ಜಾಲತಾಣದಲ್ಲಿ‌ ಪೋಸ್ಟ್ ಮಾಡಿ ಎನ್‌ಐಎ ಮತ್ತು ನಗರ ‌ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗು ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ಸ್ಕೆಚ್ ರೆಡಿ ಮಾಡಲಾಗಿದೆ.

Comments (0)
Add Comment