ಕೆವಿಜಿ ಮೆಡಿಕಲ್ ಕಾಲೇಜಿನ ಪ್ರೊ.ರಾಮಕೃಷ್ಣ ಕೊಲೆ ಪ್ರಕರಣ – ಡಾ.ರೇಣುಕಾ ಪ್ರಸಾದ್ ಗೆ ಸುಪ್ರೀಂ ಕೋರ್ಟ್‍ನಿಂದ ಜಾಮೀನು

ಸುಳ್ಯ : ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಪ್ರೋ. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಜೀವಾವದಿ ಜೈಲು ಶಿಕ್ಷೆಗೊಳಗಾಗಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ.ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಿನ್ಸಿಪಾಲ್‍ರಾಗಿದ್ದ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಡಾ.ಕೆ.ವಿ.ರೇಣುಕಾಪ್ರಸಾದ್ ಹಾಗೂ ಇತರ 4 ಮಂದಿಗೆ ಕರ್ನಾಟಕ ಹೈಕೋರ್ಟ್ ಕಳೆದ ಅ.5ರಂದು ಜೀವಾವ ಶಿಕ್ಷೆ ವಿಸಿ ತೀರ್ಪು ನೀಡಿತ್ತು. ಅದೇ ದಿನ ಆಕಾಶಭವನ ಶರಣ್ ಹೊರತುಪಡಿಸಿ ಡಾ. ರೇಣುಕಾಪ್ರಸಾದ್ ಮತ್ತು ಇತರ ಆರೋಪಿಗಳ ಬಂಧನವಾಗಿತ್ತು.

ಈ ಹಿನ್ನಲೆಯಲ್ಲಿ ಡಾ.ರೇಣುಕಾ ಪ್ರಸಾದ್ ಹಾಗೂ ಇತರ ಆರೋಪಿಗಳು ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ಮೇಲೆ ಸುಪ್ರೀಂ ಕೋರ್ಟ್‍ನಲ್ಲಿ ವಾದ ಪ್ರತಿವಾದ ನಡೆದಿತ್ತು. ಸುಪ್ರೀಂ ಕೋರ್ಟ್ ಡಾ.ರೇಣುಕಾಪ್ರಸಾದ್ ಹಾಗೂ ಇತರ ಆರೋಪಿಗಳಿಗೆ ಮೂರು ತಿಂಗಳ ಬಳಿಕ ಜ.8 ರಂದು ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯಕ್ಕೆ ಶ್ಯೂರಿಟಿ ಕೊಟ್ಟ ಬಳಿಕ ಅವರು ಬಿಡುಗಡೆಯಾಗಲಿದ್ದು, ಮಂಗಳವಾರ ಅದು ನಡೆಯುವ ಸಾಧ್ಯತೆ ಇದೆ.

Comments (0)
Add Comment