ಕೇಂದ್ರ ಸರ್ಕಾರದ ಧೋರಣೆಯಿಂದ ಮನನೊಂದು ದೇಶ ತೊರೆದ ಫ್ರೆಂಚ್ ಪತ್ರಕರ್ತೆ

ನವದೆಹಲಿ: ಎರಡು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತೆಯಾಗಿ ಭಾರತದಲ್ಲಿದ್ದ ಫ್ರಾನ್ಸ್ನ ವನೆಸ್ಸಾ ಡೊನಾಕ್ ಅವರು ಫೆ. ೧೬ ರಂದು ಸ್ವದೇಶಕ್ಕೆ ಮರಳಿದ್ದಾರೆ. ಕೇಂದ್ರದ ಮೋದಿ ಸರ್ಕಾರದ ಧೋರಣೆಯಿಂದ ಮನನೊಂದು ತವರಿಗೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವನೆಸ್ಸಾ ಡೊನಾಕ್ ಅವರು, ‘ನಾನು 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿ ಬಂದು 23 ವರ್ಷಗಳ ಕಾಲ ಪತ್ರಕರ್ತೆಯಾಗಿ ಕೆಲಸ ಮಾಡಿದ ದೇಶವನ್ನು ಬಿಟ್ಟು ಹೋಗುತ್ತಿದ್ದೇನೆ. ‘ಭಾರತವನ್ನು ತೊರೆಯುವುದು ನನ್ನ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.

ಆದರೆ ನಾನು ಬರೆದಿರುವ ಲೇಖನಗಳು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟುಮಾಡುವಂತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಇದರಿಂದ ಬೇಸತ್ತು ದೇಶವನ್ನು ತೊರೆಯುತ್ತಿದ್ದೇನೆ. ಇದರ ನಡುವೆಯು ನನಗೆ ಇಲ್ಲಿ ಜೀವನ ಮುಂದುವರಿಸಲು ಸಾಧ್ಯವಾಗುತ್ತಿಲ್ಲ”ಎಂದು ತಿಳಿಸಿದ್ದಾರೆ.

ಇನ್ನು ವನೆಸ್ಸಾ ಡೊನಾಕ್ ಅವರಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಕಳೆದ ತಿಂಗಳು ನೋಟಿಸ್ ನೀಡಿತ್ತು. ಈ ನೋಟಿಸ್ ನಲ್ಲಿ ನಿಮ್ಮ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್ ಏಕೆ ರದ್ದು ಮಾಡಬಾರದು? ಎಂದು ಉಲ್ಲೇಖ ಮಾಡಿತ್ತು. ಇದ್ದರಿಂದ ಮನನೊಂದು ವನೆಸ್ಸಾ ಅವರು ಭಾರತ ತೊರೆದಿದ್ದಾರೆ ಎನ್ನಲಾಗಿದೆ.

Comments (0)
Add Comment