ಕೇಜ್ರಿವಾಲ್ ಬಂಧನದ ಸುಳುವು ಕೊಟ್ಟ ಎಎಪಿ ನಾಯಕರು

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಲಿದೆ ಎಂಬ ಮಾಹಿತಿ ದೊರಕಿದೆ ಎಂದು ಪಕ್ಷರ ಹಿರಿಯ ಮುಖಂಡರಾಡ ಹಾಗೂ ದೆಹಲಿ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ದೆಹಲಿಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ ಗಂಟೆಗಳ ನಂತರ ನಿನ್ನೆ ಸಂಜೆ ಟ್ವೀಟ್ ಮಾಡಿದ ಅವರು ಅರವಿಂದ್ ಕೇಜ್ರಿವಾಲ್ ಅವರ ನಿವಾಸ ಟಿಎಂಆರ್‌ಡಬ್ಲ್ಯು ಬೆಳಿಗ್ಗೆ ಇಡಿ ದಾಳಿ ನಡೆಸಲಿದೆ ಎಂದು ಸುದ್ದಿ ಬರುತ್ತಿದೆ. ಬಂಧಿಸುವ ಸಾಧ್ಯತೆಯಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಅವರಿಗೆ ಇ.ಡಿ ಸೂಚಿಸಿತ್ತು. ಆದರೆ ಅವರು ವಿಚಾರಣೆಗೆ ಗೈರಾಗಿದ್ದಾರೆ.

ಜಾರಿ ನಿರ್ದೇಶನಾಲಯ ನೀಡುವ ಸಮನ್ಸ್ ಅನ್ನು ಯಾವುದೇ ವ್ಯಕ್ತಿ ಗರಿಷ್ಠ ಮೂರು ಬಾರಿ ಕಡೆಗಣಿಸಬಹುದಾಗಿದೆ. ಈಗ ಕೇಜ್ರಿವಾಲ್ ಅವರು ಈ ಮಿತಿಯನ್ನು ಪೂರೈಸಿದ್ದಾರೆ. ಈಗ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ಗೆ ಇ.ಡಿ ಮನವಿ ಸಲ್ಲಿಸಬಹುದು. ಈ ಮೂಲಕ ಅವರು ಕೋರ್ಟ್‌ಗೆ ಹಾಜರಾಗುವಂತೆ ಮಾಡಬಹುದು. ಒಂದು ವೇಳೆ ಜಾಮೀನುರಹಿತ ವಾರಂಟ್‌ಗೆ ಕೂಡ ಸಹಕರಿಸಿದೆ ಇದ್ದರೆ, ಅವರನ್ನು ಬಂಧಿಸಬಹುದಾಗಿದೆ.

ಪಕ್ಷದ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ಇಡಿಗೆ ಸಹಕರಿಸಲು ಸಿದ್ಧರಾಗಿದ್ದಾರೆ . ಆದರೆ ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಪ್ರಚಾರದಿಂದ ಅವರನ್ನು ತಡೆಯಬೇಕೆಂಬ ಹಾಗೂ ಅವರನ್ನು ಬಂಧಿಸುವ ಉದ್ದೇಶದಿಂದ ನೋಟಿಸ್ ಕಳುಹಿಸಲಾಗಿದೆ ಇದು “ಕಾನೂನುಬಾಹಿರ” ಎಂದು ಎಎಪಿ ಮೂಲಗಳು ತಿಳಿಸಿವೆ

Comments (0)
Add Comment