ಕೇಪ್ ವರ್ಡೆ ದ್ವೀಪದ ಬಳಿ ದೋಣಿ ಮಗುಚಿ 60ಕ್ಕೂ ಹೆಚ್ಚು ವಲಸಿಗರು ಮೃತ್ಯು

ಆಫ್ರಿಕಾ: ಸೆನೆಗಲ್‌ನಿಂದ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಕೇಪ್ ವರ್ಡೆಯ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ ಪರಿಣಾಮ 60ಕ್ಕೂ ಹೆಚ್ಚು ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಜುಲೈ 10 ರಂದು ಸೆನೆಗಲ್‌ನಿಂದ ಹೊರಟಿದ್ದು 101 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು ಇದು ಸೆನೆಗಲ್‌ನಿಂದ ಹೊರಟಿದ್ದು, ಮಂಗಳವಾರ ಕೇಪ್‌ ವರ್ಡೆ ದ್ವೀಪದಲ್ಲಿ ಮಗುಚಿದೆ.

ಕೇಪ್ ವರ್ಡೆಯ ಸಾಲ್ಟ್ ಐಲ್ಯಾಂಡ್‌ನ ಉತ್ತರಕ್ಕೆ 150 ಮೈಲುಗಳಷ್ಟು ದೂರದಲ್ಲಿ ತೇಲುತ್ತಿರುವ ದೋಣಿಯನ್ನು ಸ್ಪ್ಯಾನಿಷ್ ಮೀನುಗಾರರೊಬ್ಬರು ಕಂಡು ಪೊಲೀಸರಿಗೆ ವಿಷಯ ತಲುಪಿಸಿದ್ದರು.

ಇಲ್ಲಿಯವರಗೆ ನಾಲ್ಕು ಮಕ್ಕಳು ಸೇರಿದಂತೆ ಮೂವತ್ತೆಂಟು ಜನರನ್ನುರಕ್ಷಿಸಲಾಗಿದೆ. ರಕ್ಷಿತ ವಲಸಿಗರನ್ನು ಸೆನೆಗಲ್‌ಗೆ ಕರತರಲಾಗುವುದು’ ಎಂದು ಸೆನೆಗಲ್‌ನ ವಿದೇಶಾಂಗ ಸಚಿವಾಲಯ ಮಂಗಳವಾರ ತಡರಾತ್ರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಅಟ್ಲಾಂಟಿಕ್ ಸಮುದ್ರದ ಈ ಮಾರ್ಗವು ವಿಶ್ವದಲ್ಲಿಯೇ ಅತಿ ಅಪಾಯಕಾರಿಯಾದ ಮಾರ್ಗವಾಗಿದೆ. ಆಫ್ರಿಕನ್‌ ವಲಸಿಗರು ಕ್ಯಾನರಿ ದ್ವೀಪಗಳ ಮೂಲಕ ಸ್ಪೇನ್‌ಗೆ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಕಳ್ಳಸಾಗಣೆದಾರರು ಹೆಚ್ಚಾಗಿ ಈ ಮಾರ್ಗವನ್ನು ಬಳಸುತ್ತಿದ್ದು, ವಲಸೆ ಕಾರ್ಮಿಕರಿಗೆ ಸುರಕ್ಷಿತ ಮಾರ್ಗವೊಂದು ಬೇಕಿದೆ.

Comments (0)
Add Comment