ಕೇರಳದಲ್ಲಿ ಇಸ್ರೇಲ್‌ ಮಹಿಳೆ ಸಾವು : ಕೊಲೆ ಮಾಡಿದ್ನಾ ಲಿವ್​ಇನ್​ ಪಾರ್ಟ್ನರ್‌?

ಕೊಲ್ಲಂ(ಕೇರಳ) : ಕೇರಳದಲ್ಲಿ ಇಸ್ರೇಲ್‌ನ 36 ವರ್ಷದ ಮಹಿಳೆಯೊಬ್ಬರ ಶವ ಮನೆಯಲ್ಲಿ ಪತ್ತೆಯಾಗಿದ್ದು, ಅವರ ಜತೆ ವಾಸವಿದ್ದ ಕೇರಳದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮಹಿಳೆ ಈ ಮೊದಲು 15 ವರ್ಷಗಳಿಂದ ಉತ್ತರಾಖಂಡದಲ್ಲಿದ್ದರು. ಕಳೆದ ಒಂದು ವರ್ಷದಿಂದ ಕೇರಳದಲ್ಲಿ ವಾಸಿಸುತ್ತಿದ್ದರು. ಗಾಯಾಳು ವ್ಯಕ್ತಿ 70 ವರ್ಷದವನಾಗಿದ್ದು ಆತನ ಹೆಸರು ಯೋಗ ಆಚಾರ್ಯ. ಇವರಿಬ್ಬರು ಒಂದೇ ಕಡೆ ವಾಸವಿದ್ದರು ಎಂದು ತಿಳಿದು ಬಂದಿದೆ. ಜೊತೆಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಕತ್ತು ಸೀಳಲಾಗಿದೆ. ಆ ಬಳಿಕ ತನ್ನ ಕುತ್ತಿಗೆ ಮತ್ತು ಹೊಟ್ಟೆಗೆ ಆತ ಇರಿದುಕೊಂಡಿದ್ದ ಎಂದು ಹೇಳಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಖಿನ್ನತೆಗೆ ಒಳಗಾಗಿದ್ದು, ಆಕೆಗೆ ಯೋಗ ಪಾಠ ಮಾಡಿದರೂ ಸರಿಹೋಗಲಿಲ್ಲ. ಆರೋಪಿ ಸೋರಿಯಾಸಿಸ್​ನಿಂದ ಬಳಲುತ್ತಿದ್ದ. ಆತನಿಗೆ ಬದುಕಲು ಆಸೆ ಇರಲಿಲ್ಲ. ಈ ಕಾರಣಗಳಿಂದಾಗಿ ಇಬ್ಬರು ತಮ್ಮ ಬದುಕು ಕೊನೆಗೊಳಿಸಲು ನಿರ್ಧರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದುರದೃಷ್ಟವಶಾತ್​ ಮಹಿಳೆ ಸಾವನ್ನಪ್ಪಿದ್ದಾಳೆ ಲಿವ್​ಇನ್​ ಪಾರ್ಟ್ನರ್‌​ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments (0)
Add Comment