ಕೇರಳದ ದೇವಸ್ಥಾನದಲ್ಲಿ ಮದಗಜಗಳ ಕಾಳಗ – ವಿಡಿಯೋ ವೈರಲ್

ಕೇರಳ: ಎರಡು ದೇವಸ್ಥಾನದ ಆನೆಗಳ ನಡುವೆ ಕಾಳಗ ನಡೆದ ಘಟನೆ ಕೇರಳದ ಆರಟ್ಟುಪುಳ ದೇವಸ್ಥಾನದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಗಾಗಿ ಧಾರ್ಮಿಕ ಸಭೆ ನಡೆಯುತ್ತಿದ್ದು, ಆನೆಗಳನ್ನು ಚಿನ್ನದ ಅಲಂಕಾರದಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಇದ್ದಕ್ಕಿದ್ದಂತೆ, ಒಂದು ಆನೆ ತನ್ನ ಸುತ್ತಲೂ ತಿರುಗಲು ಪ್ರಾರಂಭಿಸಿದೆ, ಮತ್ತು ಕೆಲವೇ ಕ್ಷಣಗಳಲ್ಲಿ ಅದು ಅಲ್ಲೆ ಇದ್ದ ಮತ್ತೊಂದು ಆನೆಯ ಕಡೆಗೆ ನುಗ್ಗಿ ಕಾಳಗ ಪ್ರಾರಂಭಿಸಿದೆ. ಆನೆಯ ಮಾವುತರು ಆನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಆನೆಗಳೂ ಮಾತ್ರ ಕಾಳಗ ಮುಂದುವರೆಸಿದ್ದವು.

ಸ್ಥಳೀಯ ವರದಿಗಳ ಪ್ರಕಾರ, ನಿನ್ನೆ ರಾತ್ರಿ 10:30 ರ ಸುಮಾರಿಗೆ ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಧಾರ್ಮಿಕ ಮೆರವಣಿಗೆಯಲ್ಲಿ ಈ ಘಟನೆ ಸಂಭವಿಸಿದೆ. ದೇವಸ್ಥಾನದ ಮೆರವಣಿಗೆಯ ಪ್ರಮುಖ ಆನೆ ಗುರುವಾಯೂರು ರವಿಕೃಷ್ಣನ್ ಹಾಗೂ ಶ್ರೀ ಕುಮಾರನ್ ಎಂಬ ಮತ್ತೊಂದು ದೇವಾಲಯದ ಆನೆಯೊಂದಿಗೆ ಕಾಳಗ ಮಾಡಿದೆ. ಈ ವೇಳೆ ಆನೆ ದಳದ ಸದಸ್ಯರು ಆನೆಗಳ ನಿಯಂತ್ರಣಕ್ಕೆ ಪ್ರಯತ್ನಿಸಿದರು, ಆದರೂ ಆನೆಗಳು ಸ್ಥಳದಿಂದ ಓಟಕ್ಕಿತ್ತಿವೆ.

Comments (0)
Add Comment