ಕೇರಳ ಸರ್ಕಾರದ ಸಚಿವಾಲಯಕ್ಕೆ ಬಾಂಬ್​​​ ಬೆದರಿಕೆ – ಓರ್ವ ಅರೆಸ್ಟ್

ಕೇರಳ: ಕೇರಳ ಸರ್ಕಾರದ ಸಚಿವಾಲಯಕ್ಕೆ ಇಂದು ಬೆಳಿಗ್ಗೆ ಬಾಂಬ್​​​ ಬೆದರಿಕೆ ಬಂದಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.

ಬಾಂಬ್​​​ ಬೆದರಿಕೆ ಬಂದಿರುವುದರಿಂದ ಕೆಲಹೊತ್ತು ಅಲ್ಲಿ ಆಂತಕವನ್ನು ಸೃಷ್ಟಿಯಾಗಿದ್ದು, ಕೇರಳ ಪೊಲೀಸ್ ಪ್ರಧಾನ ಕಚೇರಿಗೆ ದೂರವಾಣಿ ಕರೆ ಬಂದಿದ್ದು. ಸೆಕ್ರೆಟರಿಯೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ.

ಇನ್ನು ಈ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಬೆದರಿಕೆ ಕರೆ ಎಂದು ಪೊಲೀಸರು ಹೇಳಿದ್ದಾರೆ.

ಕೇರಳ ಸರ್ಕಾರದ ಸಚಿವಾಲಯಕ್ಕೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Comments (0)
Add Comment