ಕೇರಳ ಸ್ಪೋಟ ಕುರಿತು ವಿವಾದಾತ್ಮಕ ಹೇಳಿಕೆ: ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ

ಕೊಚ್ಚಿ: ಕೇರಳದ ಚರ್ಚ್​ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಬಾಂಬ್​ ಸ್ಪೋಟಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ದ್ವೇಷವನ್ನು ಹರಡಲು ಯತ್ನಿಸಿದರೆಂಬ ಆರೋಪದಡಿ ಸಚಿವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸೈಬರ್ ಸೆಲ್ ಎಸ್‌ಐ ದೂರಿನ ಆಧಾರದ ಮೇಲೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಶೇಖರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿದೂರು ದಾಖಲಿಸಿಕೊಂಡಿದ್ದಾರೆ

ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಚಂದ್ರಶೇಖರ್ ಅವರು, ‘ಭ್ರಷ್ಟಾ ಚಾರದ ಆರೋಪದಿಂದ ಅಪಖ್ಯಾ ತಿ ಪಡೆದ ಸಿಎಂ ಪಿಣರಾಯಿ ವಿಜಯನ್ ಅವರದ್ದುಕೊಳಕು ನಾಚಿಕೆಯಿಲ್ಲದ ರಾಜಕಾರಣ. ದೆಹಲಿಯಲ್ಲಿ ಕುಳಿತು ಇಸ್ರೇ ಲ್ ವಿರುದ್ಧ ಪ್ರತಿಭಟನೆ ನಡೆಸುವ ಹೊತ್ತಿ ಗೆ ಕೇರಳದಲ್ಲಿ ಹಮಾಸ್ ಉಗ್ರರು ಜಿಹಾದ್ ಗೆ ಕರೆ ನೀಡುತ್ತಿದ್ದು , ಇದರ ಪರಿಣಾಮ ಮುಗ್ದ ಕ್ರೈ ಸ್ತರ ಮೇಲೆ ದಾಳಿ ಹಾಗೂ ಬಾಂಬ್ ಸ್ಪೋ ಟಗಳಾಗುತ್ತಿವೆ. ವಿಜಯನ್ ಸುಳ್ಳು ಗಾರ’ ಎಂದು ವಾಗ್ದಾಳಿ ನಡೆಸಿದ್ದರು.

್ಕೇರಳದಲ್ಲಿ ಸರಣಿ ಸ್ಫೋಟದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಅಥವಾ ಕೋಮುದ್ವೇಷ ಹರಡುವ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಸರ್ಕಾರ ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದರು.

Comments (0)
Add Comment