ಕೈ-ಕೈ ಹಿಡಿದು ಹಾಲೆಂಡ್ ಮಾಜಿ ಪ್ರಧಾನಿ, ಪತ್ನಿ ದಯಾಮರಣಕ್ಕೆ ಶರಣು

ಹಾಲೆಂಡ್: ಹಾಲೆಂಡ್‌ನ‌ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್‌ ಆಗ್ಟ್ ಮತ್ತವರ ಪತ್ನಿ ಯೂಜೆನಿ ಆ್ಯಗ್ಟ್ ತಮ್ಮ 93ನೇ ವರ್ಷದಲ್ಲಿ ಪರಸ್ಪರ ಕೈ-ಕೈ ಹಿಡಿದುಕೊಂಡು ಸಾವನ್ನಪ್ಪಿದ್ದಾರೆ. ಡ್ರೈಸ್ ವ್ಯಾನ್‌ ಆಗ್ಟ್ ಅವರು ಸಾವಿಗೆ ಮುನ್ನ, ‘ನನ್ನ ಹುಡುಗಿ’ ಜೊತೆ 70 ವರ್ಷ ಕಳೆದಿದ್ದೇನೆ. ಆಕೆಯ ಜೊತೆಗೆ ನನ್ನ ಪ್ರಯಾಣ ಅಂತ್ಯಗೊಳಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು ಎಂದು ವರದಿಯಾಗಿದೆ.

ಇಬ್ಬರು ಕಳೆದ ತಿಂಗಳು ತಮ್ಮ ತವರೂರಾದ ನಿಜಿಮೆಗಾನ್ ನಲ್ಲಿ ದಯಾಮರಣ ಪಡೆದು ಜೀವನ ಅಂತ್ಯಗೊಳಿಸಿದರು. ‘ರೈಟ್ಸ್ ಫಾರ್ಮ್ಸ್’ ಮಾನವ ಹಕ್ಕುಗಳ ಸಂಘಟನೆ ಮಿಸ್ಟರ್ ಅಗ್ಟ್ ಈ ವಿಷಯ ಪ್ರಕಟಿಸಿದ್ದಾರೆ. ದಂಪತಿ ಇಬ್ಬರೂ ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. “ನಮ್ಮಿಬ್ಬರಿಂದ ಬದುಕಲಾಗದು. ಆದ್ದರಿಂದ ದಯಾಮರಣಕ್ಕೆ ಅವಕಾಶ ಕೊಡಿ’ ಎಂಬ ದಂಪತಿಯ ಮನವಿಯನ್ನು ಸರಕಾರ ಸಮ್ಮತಿಸಿದೆ. ಫೆಬ್ರವರಿ 5ರಂದೇ ಇಬ್ಬರು ಮರಣ ಹೊಂದಿದ್ದರೂ, ಮಾಜಿ ಪ್ರಧಾನಿಯೇ ಸ್ಥಾಪಿಸಿರುವ “ರೈಟ್ಸ್‌ ಫೋರಮ್‌’. ದಂಪತಿಯ ಕುಟುಂಬಸ್ಥರ ಅನುಮತಿ ಪಡೆದು ಬುಧವಾರ ಸುದ್ದಿ ಪ್ರಕಟಿಸಿದೆ. ಡೇರಿಸ್ ವ್ಯಾನ್ ಆಗ್ಟ್ 1977ರಿಂದ 1982ರ ಅವಧಿಯಲ್ಲಿ ಹಾಲೆಂಡ್ ಪ್ರಧಾನಿ ಆಗಿದ್ದರು.

ಆಗ್ಟ್ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಅಪೀಲ್ ಪಾರ್ಟಿ ಮೊದಲ ನಾಯಕ ಎನಿಸಿಕೊಂಡಿದ್ದರು. ಡ್ರೈಸ್‌-ಯೂಜೆನಿ ದಂಪತಿಗೆ 93 ವರ್ಷ. ಪತ್ನಿಯನ್ನು ಡ್ರೈಸ್‌ ಸದಾ ನನ್ನ ಹುಡುಗಿ ಎಂದೇ ಪ್ರೀತಿಯಿಂದ ಸಂಬೋಧಿಸುತ್ತಿದ್ದರು. 2019ರಲ್ಲಿ ಡ್ರೈಸ್‌ಗೆ ಬ್ರೈನ್‌ ಹ್ಯಾಮರೇಜ್‌ ಆಯ್ತು. ಅಲ್ಲಿಂದ ಅವರ ಶಾರೀರಿಕ ಸ್ವಾಧೀನ ತಪ್ಪಿತು. ಪೂರ್ಣ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾದ ಸ್ಥಿತಿ. ಇನ್ನು 93 ವರ್ಷದ ಪತ್ನಿ ಯೂಜೆನಿಯೂ ದುರ್ಬಲರಾಗಿದ್ದರು. ಈ ನೋವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನಿಸಿದಾಗ ಪರಸ್ಪರ ಒಟ್ಟಿಗೆ ದೇಹಬಿಡಲು ನಿರ್ಧರಿಸಿದರು.

Comments (0)
Add Comment