ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

 

ಚಿತ್ರದುರ್ಗ: ಕೊಡಗು ಸೈನಿಕ ಶಾಲೆಯಲ್ಲಿ 6ನೇ ತರಗತಿ (ಹುಡುಗರು ಮತ್ತು ಹುಡುಗಿಯರು) ಹಾಗೂ 9ನೇ ತರಗತಿಯಲ್ಲಿ (ಹುಡುಗರು ಮಾತ್ರ) ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದ್ದು, ಡಿಸೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಜಿಯನ್ನು https://exams.nta.ac.in/AISSEE ಎಂಬ ಜಾಲತಾಣದಲ್ಲಿ ಮಾತ್ರ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆಯನ್ನು 2024ರ ಜನವರಿ 21ರಂದು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ www.sainikschoolkodagu.edu.in ಎಂಬ ಜಾಲತಾವಣವನ್ನು ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
Comments (0)
Add Comment