ಕೊಬ್ಬರಿ ಖರೀದಿ ನೋಂದಣಿ: ಫೆ.1ಕ್ಕೆ ಮುಂದೂಡಿಕೆ

 

ಚಿತ್ರದುರ್ಗ : ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉಂಡೆಕೊಬ್ಬರಿಯನ್ನು ಖರೀದಿಸುವ ನೋಂದಣಿ ಪ್ರಕ್ರಿಯೆಯನ್ನು ಸರ್ಕಾರ ಆದೇಶದ ಅನುಸಾರ 2024ರ ಫೆಬ್ರವರಿ 1ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಬಯೋಮೆಟ್ರಿಕ್ ಮೂಲಕ ರೈತರು ನೊಂದಣಿ ಮಾಡಿಕೊಳ್ಳುವ ತಂತ್ರಾಂಶದ ಉನ್ನತಿ ಕಾರ್ಯ ಪ್ರಗತಿಯಲ್ಲಿರುವುದರಿಂದ ತಾತ್ಕಾಲಿಕವಾಗಿ ಕೊಬ್ಬರಿ ಖರೀದಿ ನೊಂದಣಿ ಕಾರ್ಯ ಮುಂದೂಡಲಾಗಿದೆ.

ತಂತ್ರಾಂಶ ಉನ್ನತೀಕರಣದ ನಂತರ ಜಿಲ್ಲೆಯ ರೈತರು ಚಿತ್ರದುರ್ಗ, ಹಿರಿಯೂರು ಹಾಗೂ ಹೊಸದುರ್ಗ ಎ.ಪಿ.ಎಂ.ಸಿಗಳಲ್ಲಿ ಆಧಾರ್ ಕಾರ್ಡ್ ಮತ್ತು ಎಫ್.ಐ.ಡಿ ಕಾರ್ಡ್‍ಗಳೊಂದಿಗೆ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳಬಹುದು. ಅಲ್ಲಿಯವರೆಗೆ ರೈತರು ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಬಸವೇಶ ಎಸ್.ನಾಡಿಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments (0)
Add Comment