ಕೋಳಿ ಸಾಕಾಣಿಕೆ ಹಾಗೂ ತೋಟಗಾರಿಕೆ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರದಲ್ಲಿ ಆಸಕ್ತರು ಭಾಗವಹಿಸಿ

 

 ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಜನವರಿ 9 ರಂದು ಬೆಳಿಗ್ಗೆ 10ಕ್ಕೆ ವೈಜ್ಞಾನಿಕ ಕೋಳಿ ಸಾಕಾಣಿಕೆ ಹಾಗೂ ಜ.10 ರಂದು ಬೆಳಿಗ್ಗೆ 10ಕ್ಕೆ ಸಾವಯವ ಮತ್ತು ನೈಸರ್ಗಿಕ ಪದ್ದತಿಯಲ್ಲಿ ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತು ಒಂದು ದಿನ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಜ.9 ರಂದು  ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ತಿಪ್ಪೇಸ್ವಾಮಿ ಪಶುಸಂಗೋಪನಾ  ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಾ. ದೊಡ್ಡಮಲ್ಲಯ್ಯ, ಹಿರಿಯೂರು ಪಶು ವೈದ್ಯಾಧಿಕಾರಿ ಹಾಗೂ ಕುಕ್ಕುಟ ತಜ್ಞ ಡಾ.ಸಂಪತ್‍ಕುಮಾರ್ ಜೆ ಕೋಳಿಯಲ್ಲಿ ಉತ್ತಮ ತಳಿಗಳ ಆಯ್ಕೆ, ಕೋಳಿ ಫಾರಂ ನಿರ್ವಹಣೆ, ಆಹಾರÀ ನಿರ್ವಹಣೆ ಮತ್ತು ಅವುಗಳ ಆರೋಗ್ಯ ನಿರ್ವಹಣೆ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಜ.10 ರಂದು ಪ್ರಗತಿಪರ ಸಾವಯವ ಮತ್ತು ನೈಸರ್ಗಿಕ ಕೃಷಿಕರಾದ ಪ್ರೊ. ಮಹಾಲಿಂಗಯ್ಯ, ಹಫೀಝ್ ಉಲ್ಲಾಖಾನ್, ಮೃತ್ಯುಂಜಯಪ್ಪ ಹಾಗೂ ಚನ್ನಕೇಶವ ಸ್ವಾಮಿ, ಸಾವಯವ ಮತ್ತು ನೈಸರ್ಗಿಕ ಪದ್ದತಿಯಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಬೆಳೆಗಳ ನಿರ್ವಹಣೆ, ಅಂತರ ಬೆಳೆ ಮತ್ತು ಬಹುಬೆಳೆ ಪದ್ದತಿಗಳ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಪ್ರತಿ ತರಬೇತಿಗೆ 50 ಜನರು ಮಾತ್ರ ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ. ತರಬೇತಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗುವುದು. ತರಬೇತಿಯಲ್ಲಿ ಭಾಗವಹಿಸಲು ಕೃಷಿ ಕೇಂದ್ರ ಸಹಾಯಕ ನಿರ್ದೇಶಕ ರಜನೀಕಾಂತ ಆರ್ (8277931058), ಕೃಷಿ ಅಧಿಕಾರಿಗಳಾದ ಟಿ.ಪಿ.ರಂಜಿತಾ (8277930959) ಮತ್ತು ಪವಿತ್ರಾ ಎಂ. ಜೆ. (9535412286) ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೋಳಿ ಸಾಕಾಣಿಕೆ ಹಾಗೂ ತೋಟಗಾರಿಕೆ ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರದಲ್ಲಿ ಆಸಕ್ತರು ಭಾಗವಹಿಸಿ
Comments (0)
Add Comment