ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ನಲ್ಲಿ ಜೀವಂತ ಹುಳು: ವಿಡಿಯೋ ವೈರಲ್

ಹೈದರಬಾದ್: ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಬಾರ್‌ನಲ್ಲಿ ಜೀವಂತ ಹುಳುವೊಂದು ತೆವಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಬಿನ್ ಝಾಕಿಯಸ್ ಎಂಬವರು ಹೈದರಾಬಾದ್‌ ನಗರದ ಮೆಟ್ರೋ ನಿಲ್ದಾಣದಿಂದ 45 ರೂ. ಕೊಟ್ಟು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಅನ್ನು ಖರೀದಿಸಿದ್ದರು. ಈ ಚಾಹೊಲೇಟ್ ತೆರೆದು ನೋಡಿದಾಗ ಜೀವಂತ ಹುಳುವೊಂದು ತೆವಳುತ್ತಿರುವುದು ಕಂಡು ಬಂದಿದೆ.

ಝಾಕಿಯಸ್ ಅವರು ಡೈರಿ ಮಿಲ್ಕ್ ಚಾಕೊಲೇಟ್ ಮೇಲೆ ಹುಳುವೊಂದು ತೆವಳುತ್ತಿರುವ ವಿಡಿಯೋ ಮತ್ತು ಅದರೊಂದಿಗೆ ೪೫ ರೂ. ಪಾವತಿಸಿದ ಚಾಕೊಲೇಟ್‌ನ ಬಿಲ್ ಅನ್ನು ಸಹ ಲಗತ್ತಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹರಿ ಬಿಟ್ಟಿದ್ದು, ಈ ಪೋಸ್ಟ್ ನ ಕೆಳಗಡೆ ಇವುಗಳ ಅವಧಿ ಮುಗಿಯುವ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ಇದೆಯೇ? ಸಾರ್ವಜನಿಕ ಆರೋಗ್ಯದ ಅಪಾಯಗಳಿಗೆ ಯಾರು ಹೊಣೆ? ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವು ಮಂದಿ ಕ್ಯಾಡ್ಬರಿ ಕಂಪನಿಯ ವಿರುದ್ದ ಬಳಕೆದಾರರು ನೆಗೆಟಿಗ್ ಕಮೆಂಟ್ ಬರೆದು ಹಾಕಿದ್ದಾರೆ.

ಇನ್ನು ಈ ಪೋಸ್ಟರ್ ಗೆ ಪ್ರತಿಕ್ರಿಯಿಸಿದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಸಂಬಂಧಿತ ಆಹಾರ ಸುರಕ್ಷತಾ ತಂಡ @AFCGHMC ಈ ವಿಷಯದ ಬಗ್ಗೆ ಎಚ್ಚರಿಸಲಾಗಿದೆ ಮತ್ತು ಅದೇ ಸಮಯದಲ್ಲಿ ಅದನ್ನು ಪರಿಹರಿಸಲಾಗುವುದು” ಎಂದು ಪೋಸ್ಟ್ ಹಾಕಿದ್ದಾರೆ.

ಇನ್ನು ಝಾಕಿಯಸ್ ಅವರ ಪೋಸ್ಟ್‌ಗೆ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ Mondelez ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್, “ಹಾಯ್, ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಅತ್ಯುನ್ನತ ಗುಣಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ. ಈ ಘಟನೆಯಿಂದ ನಿಮಗೆ ಅಹಿತಕರ ಅನುಭವವನ್ನು ಉಂಟಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಸಮಸ್ಯೆಯನ್ನು ತಿಳಿಸಲು mdlzindia.com ನಲ್ಲಿ ನಿಮ್ಮ ಪೂರ್ಣ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಖರೀದಿ ವಿವರಗಳನ್ನು ನಮಗೆ ಒದಗಿಸುತ್ತದೆ. ನಿಮ್ಮ ದೂರಿನ ಬಗ್ಗೆ ಸರಿಯಾದ ಕ್ರಮತೆಗೆದುಕೊಳ್ಳಲು ಈ ಎಲ್ಲಾ ವಿವರಗಳನ್ನು ಕೇಳಲಾಗಿದೆ ಧನ್ಯವಾದಗಳು ಎಂದು ಬರೆದುಕೊಂಡಿದೆ.

Comments (0)
Add Comment