ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡುತ್ತಿದೆ ಮಾಲ್ಡೀವ್ಸ್ ಸರಕಾರ – ವಿಪಕ್ಷಗಳ ಆರೋಪ

ಮಾಲೆ: ಮೊಹಮ್ಮದ್ ಮುಯಿಝು ನೇತೃತ್ವದ ಮಾಲ್ಡೀವ್ಸ್ ಸರಕಾರವು ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ರಕ್ಷಣೆ ನೀಡುತ್ತಿದೆ ಎಂದು ಮಾಲ್ಡೀವ್ಸ್‌ನ ಅತಿ ದೊಡ್ಡ ವಿರೋಧ ಪಕ್ಷ ಮಾಲ್ಡಿವಿಯನ್ ಡೆಮಾಕ್ರೆಟಿಕ್ ಪಾರ್ಟಿ(ಎಂಡಿಪಿ) ಆರೋಪ ಮಾಡಿದೆ.

ಪ್ರಾಸಿಕ್ಯೂಟರ್ ಜನರಲ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಎಂಡಿಪಿ ನಾಯಕರು ಮಾಲ್ಡೀವ್ಸ್ ಸರಕಾರದ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ಮಾಲ್ಡೀವ್ಸ್‌ನ ಮಾಲೆ ನಗರದ ಬೀದಿಯಲ್ಲಿ ಪ್ರಾಸಿಕ್ಯೂಟರ್ ಜನರಲ್ ಹುಸೇನ್ ಶಮೀಮ್ ಮೇಲೆ ದಾಳಿ ಆಗಿತ್ತು. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯನ್ನು ಖಂಡಿಸಿರುವ ಎಂಡಿಪಿ ನಾಯಕರು ‘ಸಾಂವಿಧಾನಿಕ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಮಾಲ್ಡೀವ್ಸ್ ಸರಕಾರ ವಿಫಲವಾಗಿದೆ.

ಸಕ್ರಿಯರಾಗಿರುವ ಕ್ರಿಮಿನಲ್‌ಗಳ ಜೊತೆ ಸರಕಾರಿ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಇದೇ ಕಾರಣದಿಂದ ಇಂತಹ ದಾಳಿಗಳು ನಡೆಯುತ್ತಿವೆ. ಅಂತಿಮವಾಗಿ ಸರಕಾರವೇ ಕ್ರಿಮಿನಲ್‌ಗಳ ಪರ ನಿಂತಿದೆ ಎಂದು ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿ ಆರೋಪಿಸಿದೆ.

Comments (0)
Add Comment