ಕ್ಲಾಸ್‌ ರೂಂಗೂ ಬಂತು AI ಟೀಚರ್‌

ಕೇರಳದ ತಿರುವನಂತಪುರದ ಶಾಲೆಯೊಂದು ಕೃತಕ ಬುದ್ಧಿಮತ್ತೆ(AI) ರೋಬೋ ಶಿಕ್ಷಕಿಯೊಬ್ಬಳನ್ನು ಪರಿಚಯಿಸಿದೆ.

ಇಲ್ಲಿಯವರೆಗೆ ಟಿವಿ ಆಂಕರ್‌ ಆಗಿ ಕಾಣಿಸಿಕೊಂಡಿದ್ದ AI ಮನುಷ್ಯರು ಮೊದಲ ಬಾರಿಗೆ ಶಾಲೆಗೂ ಲಗ್ಗೆ ಇಟ್ಟಿದೆ.

ಈ AI ಶಿಕ್ಷಕಿಗೆ ಐರಿಸ್‌ ಎಂದು ಹೆಸರಿಡಲಾಗಿದ್ದು ಇದನ್ನು ಕಡುವಾಯಿಲ್‌ ತಂಗಳ್‌ ಚಾರಿಟೇಬಲ್‌ ಟ್ರಸ್ಟ್‌ ಶಾಲೆಯಲ್ಲಿ ಪರಿಚಯಿಸಲಾಗಿದೆ.

ದೇಶದಲ್ಲೇ ಮೊದಲ ಹುಮನಾಯ್ಡ್  ರೋಬೋಟ್‌ ಶಿಕ್ಷಕಿ ಎಂಬ ಹೆಗ್ಗಳಿಕೆಯನ್ನು ಐರಿಸ್‌ ಪಡೆದುಕೊಂಡಿದೆ.

ಸೀರೆಉಟ್ಟು, ಕುಂಕುಮ ಹಚ್ಚಿಕೊಂಡು ಸ್ಕೇಟಿಂಗ್‌ ವೀಲ್‌ ಮೂಲಕ ಐರಿಸ್‌ ಕ್ಲಾಸ್‌ನಲ್ಲಿ ಓಡಾಡುತ್ತಾಳೆ.

Comments (0)
Add Comment