ಗಮನಿಸಿ: ಇಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ

ಸಾಮಾನ್ಯವಾಗಿ ಭಾನುವಾರ ಸರ್ಕಾರಿ ರಜಾದಿನವಾಗಿರುವ ಹಿನ್ನಲೆ ಯಾವುದೇ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ.

ಆದರೆ ಇಂದು ಪ್ರಸಕ್ತ ಹಣಕಾಸು ವರ್ಷದ ಲೆಕ್ಕಾಚಾರದ ಕೊನೆಯ ದಿನ. ಹೀಗಾಗಿ ಈ ಭಾನುವಾರ ರಜಾ ದಿನವಾಗಿದ್ದರೂ ಎಲ್ಲ ಬ್ಯಾಂಕ್‌ಗಳು ಎಂದಿನಂತೆ ಗ್ರಾಹಕರ ಸೇವೆಗೆ ತೆರೆದಿರುತ್ತವೆ.

ಹಣಕಾಸು ಚಟುವಟಿಕೆಗಳಿಗೆ ಅನುಕೂಲವುಂಟು ಮಾಡುವ ಉದ್ದೇಶದಿಂದ ಆರ್‌ಬಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಜತೆಗೆ, ಎಲ್‌ಐಸಿ ಕಚೇರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ಇಂದು ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

Comments (0)
Add Comment